ಕೇವಲ 3.1 ಓವರ್ ಗಳಲ್ಲಿ ಗೆಲುವು ಸಾಧಿಸಿದ ಆಂಗ್ಲರು

87

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಟೂರ್ನಿಯಲ್ಲಿ ಸಾಕಷ್ಟು ಅಚ್ಚರಿಯ ಆಟಗಳು ನಡೆಯುತ್ತಿವೆ. ಅಮೆರಿಕ ಮೈದಾನದಲ್ಲಿ ರನ್ ಗಳಿಸುವುದೇ ದೊಡ್ಡ ಸರ್ಕಸ್ ಆಗಿದೆ. ಹೀಗಾಗಿ ಬಲಿಷ್ಠ ತಂಡಗಳು ಸಹ ದೊಡ್ಡ ಮೊತ್ತವನ್ನು ಪೇರಿಸುತ್ತಿಲ್ಲ. ಇದೆಲ್ಲದರ ನಡುವೆ ಇಂಗ್ಲೆಂಡ್ ತಂಡ ಒಮನ್ ತಂಡದ ವಿರುದ್ಧ ಕೇವಲ 3.1 ಓವರ್ ಗಳಲ್ಲಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ ಒಮನ್ ಟೀಂಗೆ ಇಂಗ್ಲೆಂಡ್ ಬೌಲರ್ ಗಳು ಬೆವರಿಳಿಸಿದರು. ಇದರ ಪರಿಣಾಮ 13.2 ಓವರ್ ಗಳಲ್ಲಿ 47 ರನ್ ಗಳಿಗೆ ಆಲೌಟ್ ಆಯಿತು. ರಶೀದ್ 4, ಮಾರ್ಕ್ ವುಡ್, ಅರ್ಚರ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಈ ಅಲ್ಪ ಮೊತ್ತು ಚೇಸ್ ಮಾಡಿದ ಆಂಗ್ಲರು ಕೇವಲ 3.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 51 ರನ್ ಬಾರಿಸಿ ಗೆಲುವು ದಾಖಲಿಸಿತು. ಸೂಪರ್-8 ಜೀವಂತವಾಗಿರಿಸಿಕೊಂಡಿದೆ. ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ಶಿಶು ಒಮನ್ ಎದುರು 47 ರನ್ ಗಳಿಸಲು 2 ವಿಕೆಟ್ ಕಳೆದುಕೊಂಡಿದ್ದು ಸಹ ಇಲ್ಲಿ ಮುಖ್ಯವಾಗುತ್ತೆ.
error: Content is protected !!