Ad imageAd image

ಐಸಿಸಿ ಟಿ-20 ರ್ಯಾಂಕಿಂಗ್ ಬಿಡುಗಡೆ

Nagesh Talawar
ಐಸಿಸಿ ಟಿ-20 ರ್ಯಾಂಕಿಂಗ್ ಬಿಡುಗಡೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಐಸಿಸಿ ಟಿ-20 ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಗಳಾದ ಅಭಿಷೇಕ್ ಶರ್ಮಾ 875 ಅಂಕಗಳೊಂದಿಗೆ ಟಾಪ್ 1ರಲ್ಲಿದ್ದಾರೆ. ಇಶಾನ್ ಕಿಶನ್ 871 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ನಲ್ಲಿ ಅಫ್ಗಾನಿಸ್ತಾನದ ರಶೀದ್ ಖಾನ್ ಅಗ್ರಸ್ಥಾನ ಗಳಿಸಿದ್ದಾರೆ. ಭಾರತದ ವರುಣ್ ಚಕ್ರವರ್ತಿ 2ನೇ ಸ್ಥಾನ ಪಡೆದಿದ್ದು, ಜಸ್ಪ್ರೀತ್ ಬೂಮ್ರಾ 6ನೇ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ನ ಕೊನೆಯ ಮೂರು ಪಂದ್ಯಗಳಲ್ಲಿ ಅಬ್ಬರಿಸಿ ಟೀಂ ಇಂಡಿಯಾ 3ನೇ ಬಾರಿಗೆ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್ 637 ಅಂಕಗಳಿಂದ 22ನೇ ಸ್ಥಾನದಲ್ಲಿದ್ದಾರೆ. ಇನ್ನು ನಾಯಕ ಸೂರ್ಯಕುಮಾರ್ ಯಾದವ್ 9, ತಿಲಕ್ ವರ್ಮಾ 7ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟಾಪ್ 10 ಆಟಗಾರರಲ್ಲಿ ನಾಲ್ವರು ಭಾರತೀಯರಿದ್ದಾರೆ.

WhatsApp Group Join Now
Telegram Group Join Now
Share This Article