ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಐಸಿಸಿ ಟೆಸ್ಟ್ ರ್ಯಾಕಿಂಗ್ ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಟಾಪ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಬ್ಯಾಟಿಂಗ್ ನಲ್ಲಿ ಯಶಸ್ವಿ ಜೈಸ್ವಾಲ್ 4 ಹಾಗೂ ರಿಷಬ್ ಪಂತ್ 6ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಇಬ್ಬರು ಆಟಗಾರರು ಉತ್ತಮ ಸಾಧನೆ ಮಾಡಿದ್ದಾರೆ. ಟಾಪ್ 10ರಲ್ಲಿ ಬೂಮ್ರಾ ಮಾತ್ರ ಇದ್ದು, ಭಾರತದ ಉಳಿದ ಯಾವ ಬೌಲರ್ ಗಳು ಸ್ಥಾನ ಪಡೆದಿಲ್ಲ.
ಸೌಥ್ ಆಫ್ರಿಕಾದ ಕಗಿಸೊ ರಬಾಡ 2ನೇ ಸ್ಥಾನ, ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ 3ನೇ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲಿ ಇಂಗ್ಲೆಂಡ್ ನ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ. ಹ್ಯಾರಿ ಬ್ರೂಕ್ 2ನೇ ಸ್ಥಾನ, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ 3ನೇ ಸ್ಥಾನದಲ್ಲಿದ್ದು, ಭಾರತ ಯಶಸ್ವಿ ಜೈಸ್ವಾಲ್ 4 ಹಾಗೂ 6ನೇ ಸ್ಥಾನದಲ್ಲಿ ರಿಷಬ್ ಪಂತ್ ಇದ್ದು, ದಾಖಲೆ ಸಾಧನೆ ಮಾಡಿದ್ದಾರೆ.