ಪ್ರಜಾಸ್ತ್ರ ಸುದ್ದಿ
ಟೆಸ್ಟ್ ಬೌಲರ್ ಗಳ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟಾಪ್ 10 ಬೌಲರ್ ಗಳಲ್ಲಿ ಭಾರತ ತಂಡದ ಏಕೈಕ ಆಟಗಾರರ ಬೂಮ್ರಾ ಆಗಿದ್ದಾರೆ. ಮೊಹಮ್ಮದ್ ಸಿರಾಜ್ 12ನೇ ಸ್ಥಾನ ಪಡೆದಿದ್ದಾರೆ. ಕುಲ್ದೀಪ್ ಯಾದವ್ 21ನೇ ಸ್ಥಾನದಲ್ಲಿದ್ದಾರೆ.
ರವೀಂದ್ರ ಜಡೇಜಾ 17 ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ನಲ್ಲಿ ಇಂಗ್ಲೆಂಡ್ ನ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಯಶಸ್ವಿ ಜೈಸ್ವಾಲ್ 7, ರಿಷಬ್ ಪಂತ್ 8ನೇ ಸ್ಥಾನದಲ್ಲಿದ್ದಾರೆ. ಶುಭನಂ ಗಿಲ್ 13, ಕೆ.ಎಲ್ ರಾಹುಲ್ 35ನೇ ಸ್ಥಾನ ಪಡೆದಿದ್ದಾರೆ.