ಪ್ರಜಾಸ್ತ್ರ ಸುದ್ದಿ
ದುಬೈ(Dubai): ಐಸಿಸಿ ಮಹಿಳಾ ವಿಶ್ವಕಪ್ 13ನೇ ಆವೃತ್ತಿ ಸೆಪ್ಟೆಂಬರ್ 30ರಿಂದ ಆರಂಭವಾಗುತ್ತಿದೆ. ಭಾರತ ಹಾಗೂ ಶ್ರೀಲಂಕಾ ಆತಿಥ್ಯ ವಹಿಸಿಕೊಂಡಿದ್ದು, 8 ತಂಡಗಳು ಕಣದಲ್ಲಿವೆ. ಇದರಲ್ಲಿ ಗೆದ್ದ ತಂಡಕ್ಕೆ ಬರೋಬ್ಬರಿ 39.55 ಕೋಟಿ ರೂಪಾಯಿ ಸಿಗಲಿದೆ. 2023ರಲ್ಲಿ ಪುರುಷರ ಟೂರ್ನಿಯಲ್ಲಿ ವಿಜೇತ ಆಸ್ಟ್ರೇಲಿಯಾ 31.35 ಕೋಟಿ ರೂಪಾಯಿ ಬಹುಮಾನ ಪಡೆದಿತ್ತು. ಇದೀಗ ಮಹಿಳಾ ತಂಡಕ್ಕೆ ಅದಕ್ಕಿಂತ ಹೆಚ್ಚಿನದು ಸಿಗುತ್ತಿದೆ.
ಈ ಬಾರಿಯ ಟೂರ್ನಿಯ ಬಹುಮಾನ ಮೊತ್ತ 122.5 ಕೋಟಿ ಇದೆ. 2022ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದಾಗಿನ ಟೂರ್ನಿಗಿಂತ ಶೇಕಡ 297ರಷ್ಟು ಅಧಿಕವಾಗಿದೆ. 2023ರಲ್ಲಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಮೊತ್ತ 88.26 ಕೋಟಿಯನ್ನು ಮೀರಿಸಿದೆ. ಸೆಮಿಫೈನಲ್ ನಲ್ಲಿ ಸೋತ ತಂಡಗಳು 9.89 ಕೋಟಿ ರೂಪಾಯಿ ಬಹುಮಾನ ಪಡೆಯಲಿವೆ. ಮಹಿಳಾ ಕ್ರಿಕೆಟ್ ಗೆ ಆದ್ಯತೆ ನೀಡುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆಯಂತೆ.