Ad imageAd image

ನಂದಿ ಕೃಷಿ ಕ್ಷೀಣಿಸಿದರೆ ರೈತರಿಗೆ ಸಂಕಷ್ಟ: ಬಸವರಾಜ ಬಿರಾದಾರ

ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ನಂದಿ ಕೃಷಿ ಪುನಶ್ಚೇತನಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ನಡೆಯಿತು.

Nagesh Talawar
ನಂದಿ ಕೃಷಿ ಕ್ಷೀಣಿಸಿದರೆ ರೈತರಿಗೆ ಸಂಕಷ್ಟ: ಬಸವರಾಜ ಬಿರಾದಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ನಂದಿ ಕೃಷಿ ಪುನಶ್ಚೇತನಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ನಡೆಯಿತು. ನಂದಿ ಕೃಷಿ ತಜ್ಞರಾದ ಬಸವರಾಜ ಬಿರಾದಾರ ಅವರು ಮಾತನಾಡಿ, ನಂದಿ ಕೃಷಿ(agriculture) ಪುನಶ್ಚೇತನ ಕಾರ್ಯವು ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಅವರ‌ ಜನ್ಮ ಸ್ಥಳವಾದ ಬಿಜ್ಜರಗಿ ಗ್ರಾಮದಿಂದ ಪ್ರಾರಂಭವಾಗಿದೆ. ಕಳೆದ 20 ವರ್ಷಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಸುಮಾರು ಶೇಕಡ 90ರಷ್ಟು ನಂದಿ ಕೃಷಿ ಕ್ಷೀಣಿಸಿದೆ. ನಂದಿ ಕೃಷಿ ನಾಶವಾದಂತೆ ರೈತರ‌ ಕೃಷಿ ಸಾಗುವಳಿ ವೆಚ್ಚ ಹೆಚ್ಚಾಗಿ ರೈತರ ಸಾಲ ದಿನಕಳೆದಂತೆ ಹೆಚ್ಚಾಗುತ್ತಿದೆ. ಅದಕ್ಕಾಗಿ, ನಂದಿ ಕೃಷಿಯನ್ನು ಪ್ರೋತ್ಸಾಹಿಸುವ ಮಣ್ಣು ಪುನಶ್ಚೇತನ ಕಾನೂನು ಜಾರಿಗೆ ತರುವುದು ಇಂದಿನ ಮೊದಲ ಅವಶ್ಯಕತೆಯಾಗಿದೆ ಎಂದರು.

ನಂದಿ ಕೃಷಿಕರ ನೇತೃತ್ವದಲ್ಲಿ ಪ್ರತಿ ಗ್ರಾಮಗಳಲ್ಲಿ ರೈತರು(farmers) ಸಂಘಟಿತರಾಗಿ ಮಣ್ಣು ಪುನಶ್ಚೇತನ ಕಾನೂನು ಜಾರಿಗಾಗಿ ಬೇಡಿಕೆ ವ್ಯಕ್ತಪಡಿಸಬೇಕಾಗಿದೆ. ವಿಜಯಪುರ ಜಿಲ್ಲಾ ವಿಭಾಗದ ಕರ್ನಾಟಕ ರಾಜ್ಯ ರೈತ ಸಂಘಟನೆಯ ಮುಖಂಡರು ನಂದಿ ಕೃಷಿ ಪುನಶ್ಚೇತನಕ್ಕೆ ಮೊದಲ ಆದ್ಯತೆ ನೀಡಿರುವುದು ಅತ್ಯಂತ ಶ್ಲಾಘನೀಯ ಎಂದರು. ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೆಗೌಡರ ಅವರು ಮಾತನಾಡಿ, ನಂದಿ ಕೃಷಿಗೆ ಮೊದಲ ಆದ್ಯತೆ ನೀಡದರೆ ಮಾತ್ರ ಕೃಷಿ ಹಾಗೂ ನಾಗರೀಕತೆ ಉಳಿಯಲು ಸಾಧ್ಯ. ನಂದಿ ಕೃಷಿ ಪುನಶ್ಚೇತನಕ್ಕಾಗಿ ನಮ್ಮ ಸಂಘಟನೆ ಕಂಕಣ ಬದ್ಧವಾಗಿ ನಿಲ್ಲುವುದು ಎಂದರು.

ಬೆಳಗಾವಿ ವಿಭಾಗದ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬಸವರಾಜ ಧರ್ಮಗೊಂಡ ಅವರು ಮಾತನಾಡಿ, ಅನಾದಿ ಕಾಲದಿಂದ ನಮ್ಮ ಕೃಷಿ ಪರಂಪರೆ ನಂದಿ ಕೃಷಿಯಿಂದ ಬೆಳೆದು ಬಂದಿದೆ. ನಂದಿ‌ ಕೃಷಿಕರಿಗೆ ಪ್ರೋತ್ಸಾಹ ದೊರೆಯುವ ಯೋಜನೆ ಜಾರಿಗಾಗಿ ನಾವೆಲ್ಲರೂ ಒಕ್ಕೋರಲಿನಿಂದ ಪ್ರಯತ್ನಿಸುತ್ತೇವೆ ಎಂದರು. ಅಖಂಡ ಕರ್ನಾಟಕ ರೈತ ಸಂಘದ ಮುಖಂಡರಾದ ನಿಂಗನಗೌಡ ಬಿರಾದಾರ, ಕರ್ನಾಟಕ ರಾಜ್ಯ ರೈತ ಸಂಘದ ಸಿಂದಗಿ ತಾಲೂಕಾಧ್ಯಕ್ಷ ದಶರಥ ರಜಪೂತ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ವಿಜಯಕುಮಾರ ನಾಗಠಾಣ, ಕರ್ನಾಟಕ ರಾಜ್ಯ ರೈತ ಸಂಘದ ಕನ್ನೊಳ್ಳಿ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ವಾರಸನಳ್ಳಿ, ಗ್ರಾಮದ ರೈತ ಮುಖಂಡರಾದ ದಿಗಸಾಬ ಮುಲ್ಲಾ, ಸೋಮಣ್ಣ ಗುಳಬಾಳ,  ಶರಣಪ್ಪ ಪಾರಸನಳ್ಳಿ, ಗುರಪ್ಪ ಪಡಶೆಟ್ಟಿ, ಶಂಕರ ಪಾರಸನಳ್ಳಿ, ಗುರಪ್ಪ ಪಾರಸನಳ್ಳಿ, ಶ್ರೀಶೈಲ ಬೂದಿಹಾಳ, ಶಿವಪ್ಪ ಪಾರಸನಳ್ಳಿ ಹಾಗೂ‌ ಇತರರಿದ್ದರು.

WhatsApp Group Join Now
Telegram Group Join Now
Share This Article