Ad imageAd image

ಹಿಂಗಿದ್ದರೆ ವಿದ್ಯಾರ್ಥಿಗಳು ಶಾಲೆಗೆ ಬರೋದ್ಹೇಗೆ?

ರ್ಕಾರಿ ಶಾಲೆಯ ಶಿಕ್ಷಕರೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಿಲ್ಲ. ಕಾರಣ ಅಲ್ಲಿನ ವ್ಯವಸ್ಥೆ. ಹೀಗಾಗಿ ಸರ್ಕಾರಿ

Nagesh Talawar
ಹಿಂಗಿದ್ದರೆ ವಿದ್ಯಾರ್ಥಿಗಳು ಶಾಲೆಗೆ ಬರೋದ್ಹೇಗೆ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸರ್ಕಾರಿ ಶಾಲೆಯ ಶಿಕ್ಷಕರೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಿಲ್ಲ. ಕಾರಣ ಅಲ್ಲಿನ ವ್ಯವಸ್ಥೆ. ಹೀಗಾಗಿ ಸರ್ಕಾರಿ ಶಾಲೆಗೆ ಬರುವ ಪ್ರತಿಯೊಂದು ಮಕ್ಕಳು ಅತೀ ಬಡವ, ರೈತಾಪಿ ವರ್ಗ, ಹಿಂದುಳಿದ ವರ್ಗದವರೆ ಆಗಿರುತ್ತಾರೆ. ಇದೆ ಕಾರಣಕ್ಕೆ ಏನೋ ಸರ್ಕಾರಿ ಶಾಲೆ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣದ ಕಡೆ ಗಮನ ಹರಿಸುವುದಿಲ್ಲ. ಯಾಕಂದರೆ ತಾಲೂಕಿನ ರಾಂಪೂರ.ಪಿಎ ಸ್ಥಿತಿ ಹೇಗಿದೆ ಅನ್ನೋದು ಇಲ್ಲಿನ ಫೋಟೋಗಳೇ ಸಾಕ್ಷಿಯಾಗಿವೆ. ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಇಲ್ಲಿನ ಶಾಲೆಗೆ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಇಲ್ಲಿನ ಅವ್ಯವಸ್ಥೆ ಬಗ್ಗೆ ಗಮನ ಹರಿಸದೆ ಇರುವ ಪರಿಣಾಮ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಮಳೆಗಾಲವಾಗಿದ್ದು, ಶಾಲೆ ಆವರಣದ ತುಂಬಾ ನೀರು ತುಂಬಿಕೊಂಡಿದೆ. ಇದರಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಇಲ್ಲಿನ ಸಮಸ್ಯೆ ಕುರಿತು ಹಲವು ಬಾರಿ ಗ್ರಾಮ ಪಂಚಾಯ್ತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಶಿಕ್ಷರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕು ಪಂಚಾಯ್ತಿ ಆಗಲಿ, ಶಾಸಕರಾಗಲಿ ಇತ್ತ ಒಂದಿಷ್ಟು ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಿದೆ.

WhatsApp Group Join Now
Telegram Group Join Now
Share This Article