ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪ್ರಾಸಿಕ್ಯೂಷನ್ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿಯೂ ನ್ಯಾಯಾಲಯಗಳು(Court) ಜಾಮೀನು ನಿರಾಕರಿಸುತ್ತಾ ಹೋದರೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಯೋತ್ಪಾದಣಾ ವಿರೋಧಿ ಕಾನೂನು ಅಡಿಯಲ್ಲಿ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್(SC) ಈ ರೀತಿ ಹೇಳಿದೆ.
ಅರ್ಹ ಪ್ರಕರಣಗಳಲ್ಲೂ ಜಾಮೀನು(Bail) ನಿರಾಕರಿಸುತ್ತಾ ಹೋದರೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ, ಆಗಸ್ಟೈನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಹೇಳಿದೆ. ನಿಷೇಧಿತ ಪಿಎಫ್ಐ ಸಂಘೆನಯ ಸದಸ್ಯರಿಗೆ ಮನೆಯ ಮೇಲೆ ಬಾಡಿಗೆ ನೀಡಿದ್ದಕ್ಕಾಗಿ ಜಾಲಾಲುದ್ದೀನ್ ಖಾನ್ ಎಂಬುವರಿಗೆ ಜಾಮೀನು ಮೇಲೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ರೀತಿ ಹೇಳಿದೆ. ಜಾಮೀನು ನೀಡುವ ಪ್ರಕರಣಗಳಲ್ಲೂ ಅದನ್ನು ನಿರಾಕರಿಸುತ್ತಾ ಹೋಗುವುದು ಆರ್ಟಿಕಲ್ 21ರ(Article 21) ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತೆ ಎಂದು ತಿಳಿಸಲಾಗಿದೆ.