ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಹೃದಯಭಾಗದಲ್ಲಿರುವ 9ನೇ ವಾರ್ಡ್ ಗೆ ಸಂಬಂಧಿಸಿದಂತೆ 30 ಅಡಿ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದನ್ನು ತೆರವುಗೊಳಿಸದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪುರಸಭೆ ಸದಸ್ಯ ಹಾಸೀಂ ಆಳಂದ ಹೇಳಿದ್ದಾರೆ. ಈ ಕುರಿತು ಶನಿವಾರ ನಡೆದ ಸರ್ವಸದಸ್ಯರ ಸಭೆಯಲ್ಲಿಯೂ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
9ನೇ ವಾರ್ಡ್ ನಲ್ಲಿ ಹಲವು ಆಸ್ಪತ್ರೆಗಳಿವೆ. 30 ಅಡಿ ಜಾಗ ಒತ್ತುವರಿಯಾಗಿದ್ದರಿಂದ ರೋಗಿಗಳು ಆಸ್ಪತ್ರೆಗೆ ಹೋಗಲು ಸಮಸ್ಯೆಯಾಗುತ್ತಿದೆ. ಆಂಬ್ಯುಲೆನ್ಸ್ ಹೋಗಲು ಜಾಗವಿಲ್ಲ. ರಸ್ತೆಯ ಮೇಲೆಯೇ ಗೋರಿಗಳಿವೆ. ಅಕ್ರಮ ಶೆಡ್ ಗಳಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಸ್ಮಶಾನದಲ್ಲಿರುವ 30 ಅಡಿ ದಾರಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದೆ ಹೋದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.