Ad imageAd image

ಕನ್ನಡಿಗರ ತಂಟೆಗೆ ಬಂದರೆ ಎಂಇಎಸ್ ಪುಂಡರನ್ನು ಬಿಡಲ್ಲ: ಸಂತೋಷ ಮಣಿಗಿರಿ

Nagesh Talawar
ಕನ್ನಡಿಗರ ತಂಟೆಗೆ ಬಂದರೆ ಎಂಇಎಸ್ ಪುಂಡರನ್ನು ಬಿಡಲ್ಲ: ಸಂತೋಷ ಮಣಿಗಿರಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಬೆಳಗಾವಿಯಲ್ಲಿ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿಎಂಬುವರ ಮೇಲೆ ಹಲ್ಲೆ ಮಾಡಿರುವುದು ಹಾಗೂ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಣಧೀರ ಪಡೆಯ ಉತ್ತರ ವಲಯ ಅಧ್ಯಕ್ಷ ಸಂತೋಷ ಮಣಿಗಿರಿ ಅವರ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಎಂಇಎಸ್ ಪುಂಡರು ಹಾಗೂ ಹಲ್ಲೆ ಮಾಡಿದವರ ವಿರುದ್ಧ ಧಿಕ್ಕಾರ ಕೂಗಲಾಯಿತು.

ಈ ವೇಳೆ ಮಾತನಾಡಿದ ಸಂತೋಷ ಮಣಿಗಿರಿ, ರಾಜ್ಯ ಸರ್ಕಾರಕ್ಕೆ ಕನ್ನಡದ ಅಭಿಮಾನ, ನೈತಿಕತೆ ಇದ್ದರೆ ಕಂಡಕ್ಟರ್ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ಸಿಪಿಐ ಕಲ್ಯಾಣಕುಮಾರ ಶೆಟ್ಟಿಯನ್ನು ಕೂಡಲೇ ಅಮಾನತು ಮಾಡಬೇಕು. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಕನ್ನಡಿಗರ ತಂಟೆಗೆ ಬಂದರೆ ಎಂಇಸಿ ಪುಂಡರನ್ನು ಬಿಡುವುದಿಲ್ಲ. ಬೆಳಗಾವಿ ನಮ್ಮದು. ಅವರ ಪುಂಡಾಟಿಕೆ ನಮ್ಮ ಮುಂದೆ ನಡೆಯಲ್ಲ. ಸಿಂದಗಿ-ಪುಣೆ ಬಸ್ ಹಾಗೂ ಕಲ್ಯಾಣ ಕರ್ನಾಟಕ ಬಸ್ ಗಳ ಡ್ರೈವರ್, ಕಂಡ್ಕಟರ್ ಮೇಲೆ ಹಲ್ಲೆ ಮಾಡಲಾಗಿದೆ. ಬಸ್ ಗಳಿಗೆ ಹಾನಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರು ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಓಲೈಕೆ ರಾಜಕಾರಣ ಮಾಡಿದರೆ ಈಗ ಬಿಜೆಪಿಗೆ ಆಗಿರುವ ಪರಿಸ್ಥಿತಿ 2028ರಲ್ಲಿ ನಿಮಗೆ ಕನ್ನಡಿಗರು ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಹೀಮ ಕೊಗಟನೂರ, ಹರ್ಷವರ್ಧನ ಪೂಜಾರಿ ಮಾತನಾಡಿ, ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಣಧೀರ ಪಡೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹಿಬೂಬ ಆಳಂದ, ರವಿ ಶಿರವಾಳ, ರಾಮು ಗುತ್ತೆದಾರ, ಆನಂದ ಕುರಡೆ, ತಿರುಪತಿ ಬಂಕಲಗಿ, ಸಿದ್ದು ತಮದೊಡ್ಡಿ, ಬಸನಗೌಡ ಇಟಗಿ, ಅಪ್ಪು ದೊಡ್ಡಮನಿ, ಅಜೀಜ ಆಳಂದ, ಹಣಮಂತ ಕುಂಬಾರ, ಸಲೀಂ ಕನ್ನೊಳ್ಳಿ, ಮಲ್ಲು ಡಂಬಳ, ಲಾಳಮೇಶ್ವರ ಚಾಂದಕವಟೆ, ದೇವೇಂದ್ರ ಗೌಂಡಿ, ಮುತ್ತು ಗೌಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article