ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೇಹ ತೂಕದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಗೆ ಹಲವು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಕ್ರಿಕೆಟ್ ದಿಗ್ಗಜರು, ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಮಾಜಿ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್, ಈ ಹಿಂದೆಯೂ ಇಂತಹ ಮಾತುಗಳನ್ನು ನಾನು ಹಲವು ಬಾರಿ ಕೇಳಿದ್ದೇನೆ. ನಿಮಗೆ ತೆಳ್ಳಗಿರುವ ಹುಡುಗರು ಬೇಕಿದ್ದರೆ ಮಾಡೆಲ್ ಗಳನ್ನು ಕರೆದುಕೊಂಡು ಬನ್ನಿ ಎಂದು ಟಾಂಟ್ ಕೊಟ್ಟಿದ್ದಾರೆ.
ಇಲ್ಲಿ ಇರುವುದು ನೀವು ಕ್ರಿಕೆಟ್ ಎಷ್ಟು ಚೆನ್ನಾಗಿ ಆಡುತ್ತೀರಿ ಎನ್ನುವುದು. ದೇಹ ಗಾತ್ರಕ್ಕೂ ಸಾಮರ್ಥ್ಯಕ್ಕೂ ಸಂಬಂಧವಿಲ್ಲ. ಕ್ರಿಕೆಟ್ ನಲ್ಲಿ ದೈಹಿಕ ನೋಟಕ್ಕಿಂತ ಮಾನಸಿಕ ಶಕ್ತಿ ಹಾಗೂ ರನ್ ಗಳಿಸುವ ಸಾಮರ್ಥ್ಯ ಮುಖ್ಯ. ಸರ್ಫರಾಜ್ ಖಾನ್ ಭಾರತಕ್ಕಾಗಿ ಟೆಸ್ಟ್ ಪಂದ್ಯದಲ್ಲಿ 150 ರನ್ ಗಳಿಸಿದ್ದಾರೆ. 3 ಅರ್ಧ ಶತಕ ಗಳಿಸಿದ್ದಾರೆ. ಇಲ್ಲಿ ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸುವ ಮೂಲಕ ಶಮಾ ಮೊಹಮ್ಮದ್ ವಿರುದ್ಧ ಕಿಡಿ ಕಾರಿದ್ದಾರೆ.