Ad imageAd image

ಸಿಂದಗಿಯಲ್ಲಿ ಅಕ್ರಮ ನಳಗಳು ಅಧಿಕ: ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ

ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ಪುರಸಭೆ ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರನ್ನು

Nagesh Talawar
ಸಿಂದಗಿಯಲ್ಲಿ ಅಕ್ರಮ ನಳಗಳು ಅಧಿಕ: ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ಪುರಸಭೆ ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರನ್ನು ಗೆಳೆಯರ ಬಳಗ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಶಾಂತವೀರ ಬಿರಾದಾರ, ಈಗಿರುವ ಉಳಿದಿರುವ 14 ತಿಂಗಳ ಅವಧಿಯಲ್ಲಿ ಶಾಸಕರ ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಪ್ರಮಾಣಿವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಪಟ್ಟಣದಲ್ಲಿ 10 ಸಾವಿರ ಮನೆಗಳಲ್ಲಿ ಬರೀ 2,500 ಮನೆಗಳಿಗೆ ಮಾತ್ರ ಪರವಾನಿಗೆ ಪಡೆದ ನಳಗಳಿವೆ. ಇನ್ನೂಳಿದವುಗಳು ಅಕ್ರಮವಾಗಿವೆ. ಅದಕ್ಕೆ ಅವುಗಳ ಸಕ್ರಮಗೊಳಿಸಿಕೊಳ್ಳಲು 4 ಜನ ಸಿಬ್ಬಂದಿಯನ್ನು ಕಂಪ್ಯೂಟರ್ ಸಮೇತ ನೆಮಕ ಮಾಡಿದ್ದೇವೆ. ಸಾರ್ವಜನಿಕರು ಸಹಕರಿಸಿ ಎಲ್ಲರು ನೋಂದಣಿ ಮಾಡಬೇಕು ಮತ್ತು ಉತಾರಿಯ ಬಗ್ಗೆ ಎಲ್ಲೆಡೆ ಸಮಸ್ಯೆ ಹೆಚ್ಚು ಕೇಳಿ ಬರುತ್ತಿದ್ದು ಅದಕ್ಕೆ ಕಂಪ್ಯೂಟರ್ ಉತಾರೆ ಪಡೆಯಬೇಕು ಎಂದರು. ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ಕಳೆದ 30 ವರ್ಷಗಳಿಂದ ಎಂ.ಸಿ.ಮನಗೂಳಿಯವರ ಒಡನಾಡಿಯಾಗಿ ಕೆಲಸ ಮಾಡಿದ್ದು ಈ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರ ಕನಸಿನಂತೆ ನನಗೆ ಇಂದು ಅಧಿಕಾರ ದೊರೆತಿದೆ. ಶಾಸಕರ ಹಾಗೂ ಎಲ್ಲ ಸದಸ್ಯರ ಒಡನಾಡಿಯಾಗಿ ಅಧ್ಯಕ್ಷರಿಗೆ ಹೆಗಲುಕೊಟ್ಟು ಕೆಲಸ ಮಾಡುತ್ತೇನೆ ಎಂದರು.

ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ, ಬಸಯ್ಯ ಹಿರೇಮಠ ವೇದಿಕೆ ಮೇಲಿದ್ದರು.ಈ ವೇಳೆ ಗುತ್ತಿಗೆದಾರ ಚೆನ್ನು ಹೊಡ್ಲ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಎಂ.ಎಸ್.ಪಾಟೀಲ ಕೊರಳ್ಳಿ, ಚಂದ್ರಶೇಖರ ನಾಗರಬೆಟ್ಟ, ಕಸಾಪ ಅಧ್ಯಕ್ಷ ಶಿವು ಬಡಾನೂರ, ಶಿವು ಸಬರದ, ಮಲ್ಲನಗೌಡ ಪಾಟೀಲ, ಇಬ್ರಾಹೀಂಪುರ, ಪಂಡಿತ ಯಂಪೂರೆ, ಸಂಗನಗೌಡ ಪಾಟೀಲ ಅಗಸಬಾಳ, ಗುರು ಬಸರಕೋಡ, ಆರ್.ಆರ್.ಪಾಟೀಲ, ಶಂಕರ ಕುರುಡೆ, ಶಿವರಾಜ ಪೊ.ಪಾಟೀಲ, ರಾಮಚಂದ್ರ ಕಲಬುರ್ಗಿ, ಮಹಾಂತೇಶ ನೂಲಾನವರ, ಸೇರಿ ಹಲವರಿದ್ದರು. ಆನಂದ ಶಾಬಾದಿ ಸ್ವಾಗತಿಸಿ ನಿರೂಪಿಸಿದರು.

WhatsApp Group Join Now
Telegram Group Join Now
Share This Article