ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಇವತ್ತಿನ ಆಧುನಿಕ ಪ್ರಪಂಚದಲ್ಲಿ ಓದಿಗೆ ಎಷ್ಟು ಮಹತ್ವ ಕೊಡುತ್ತೇವೆಯೊ ಅಷ್ಟೇ ಮಹತ್ವ ಸಂಸ್ಕಾರಕ್ಕೂ ಕೊಡಬೇಕು. ಹೀಗಾಗಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳಸಬೇಕು. ಶಾಲೆಗಳು ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಂತಾಗಿಲಿ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ತಾಲೂಕಿನ ಜಾಲವಾದ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ, ಶ್ರೀ ಮಹಾಂತಲಿಂಗ ಶಿವಾಚಾರ್ಯ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ವಿದ್ಯಾಭಾರತಿ ಪ್ರಾಥಮಿಕ ಶಾಲೆಯ 20ನೇ ವರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇವರ ಹಿಪ್ಪರಗಿಯ ಸರ್ವೋದಯ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಎನ್.ಬಿ ಪಾಟೀಲ, ಗುಬ್ಬೇವಾಡ ಮೂರಾರ್ಜಿ ಶಾಲೆಯ ಸಂಗೀತ ಶಿಕ್ಷಕರಾದ ರಮೇಶ ಗುಬ್ಬೇವಾಡ ಮಾತನಾಡಿದರು. ಶಾಲೆಯ ಅಧ್ಯಕ್ಷರಾದ ಮಹಾಂತೇಶ ವಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಯಲ್ಲಾಲಿಂಗ ಹೇರೂರು ಶಾಲೆಯ ವರದಿ ವಾಚನ ಮಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡಿದ್ದ ಆಳಂದ, ನಂದವಾಡಗಿ, ಜಾಲವಾದ ಪೀಠಾಧ್ಯಕ್ಷರಾದ ಶ್ರೀ ಷ.ಬ್ರ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ, ಸಿನಿಮಾ ಹಾಡುಗಳು ನೃತ್ಯ ಮಾಡಿ ನೆರದಿದ್ದ ಗ್ರಾಮಸ್ಥರನ್ನು ರಂಜಿಸಿದರು.

ಮುಖ್ಯ ಅತಿಥಿಗಳಾಗಿ ಚಂದ್ರಾಮಪ್ಪ ದೇವೂರ, ರಾಜಶೇಖರ ಗುಂದಗಿ, ಎನ್.ಬಿ ಪಾಟೀಲ, ಭೀಮರಾಯ ಮನಗೂಳಿ, ರಾಜು ಕಲಕೇರಿ, ಜಿ.ಕೆ ಸಜ್ಜನ, ನಾಗೇಶ ತಳವಾರ, ಶಶಿಧರ ಬುಳ್ಳಾ, ಮಹೇಶ ಅಂಗಡಿ, ಧರ್ಮಣ್ಣ ಕನ್ನೊಳ್ಳಿ, ಗಾಯತ್ರಿ ದೇವೂರ, ಅರುಣ ಕೋರವಾರ ಭಾಗವಹಿಸಿದ್ದರು. ಅತಿಥಿಗಳಾಗಿ ಧರ್ಮರಾಜ ಪಾಟೀಲ, ಖಾದೀರ ಮೋಮಿನ, ಖಾದೀರಸಾಬ ಬೆಕಿನಾಳ, ರಮೇಶ ಹೆಬ್ಬಾಳ, ಮಲ್ಲಯ್ಯ ನಂದಿಕೋಲ, ವಿರೇಶ ಹುಣಸಗಿ, ಸಿದ್ದು ಭೈರೊಡಗಿ, ಜಗದೀಶ ಚವ್ಹಾಣ, ಸೀತಾರಾಮ ಚವ್ಹಾಣ, ವಸಂತ ಪವಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕರಾದ ಸಚಿನ, ರವಿ ಮಾಳೂರ, ನಾಗೇಶ ಟಕ್ಕಳಕಿ, ಸಾಗರ ತಳವಾರ, ಶಿವಯ್ಯ ಪುರಾಣಿಕಮಠ, ರೇಣುಕಾ ಟಕ್ಕಳಕಿ, ತೃಪ್ತಿ ಕನ್ನೊಳ್ಳಿ, ಪವಿತ್ರಾ ಗುಂಡಕರ್ಜಗಿ, ಸಾದನಾ ಸಾತಿಹಾಳ ರೇಣುಕಾ ನಾಟೀಕಾರ, ಆಫ್ರೀನಾ ಇಂಟಿ, ಪ್ರಿಯಾ ನಾಟೀಕಾರ ಸೇರಿದಂತೆ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು. ಶಾಲೆಯ ಮುಖ್ಯಗುರುಗಳಾದ ವಿದ್ಯಾಧರ ಟಕ್ಕಳಕಿ ಸ್ವಾಗತಿಸಿದರು. ಶಿಕ್ಷಕ ಗೋಪಾಲ ಹಡಲಗಿ ನಿರೂಪಿಸಿದರು. ಶಿಕ್ಷಕಿ ಶೋಭಾ ವಡಗೇರಿ ವಂದಿಸಿದರು.