Ad imageAd image

ಚಿಕ್ಕಮಗಳೂರಲ್ಲಿ ಪ್ಯಾಲೆಸ್ಟೀನ್ ಬಾವುಟ ಹಿಡಿದು ಓಡಾಡಿದ ಪುಂಡರು

ರಡು ಬೈಕ್ ಗಳಲ್ಲಿ ಯುವಕರು ಪ್ಯಾಲೆಸ್ಟೀನ್ ಬಾವುಟ ಹಿಡಿದು ಓಡಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Nagesh Talawar
ಚಿಕ್ಕಮಗಳೂರಲ್ಲಿ ಪ್ಯಾಲೆಸ್ಟೀನ್ ಬಾವುಟ ಹಿಡಿದು ಓಡಾಡಿದ ಪುಂಡರು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು(Chikkamgaloru): ಎರಡು ಬೈಕ್ ಗಳಲ್ಲಿ ಯುವಕರು ಪ್ಯಾಲೆಸ್ಟೀನ್(palestine flag) ಬಾವುಟ ಹಿಡಿದು ಓಡಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದೊಂದು ಬೈಕಿನಲ್ಲಿ ಮೂವರು ಕುಳಿತು ಭಾನುವಾರ ಓಡಾಟ ನಡೆಸಿರುವ ವಿಡಿಯೋ ವೈರಲ್ ಆಗಿದೆ. ದಂಟಮರಕ್ಕಿ ಕೆರೆ ರಸ್ತೆಯಿಂದ ಹನುಮಂತಪ್ಪ ಸರ್ಕಲ್ ಕಡೆ ಹೋಗಿರುವ ದೃಶ್ಯ ಸೆರೆಯಾಗಿದೆ. ಈ ಘಟನೆ ಖಂಡಿಸಿದ ಹಿಂದೂಪರ ಸಂಘಟನೆಗಳು ನಗರ ಠಾಣೆ ಮುಂದೆ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ನಾಗಮಂಗಲ ಘಟನೆ ನಡೆದಿದೆ. ಸೋಮವಾರ ಈದ್ ಮಿಲಾದ್ ಇದೆ. ಎರಡು ದಿನಗಳ ಕಾಲ ಗಣೇಶ ವಿಸರ್ಜನೆ ನಡೆಯುತ್ತದೆ. ಇಂತಹ ಹೊತ್ತಿನಲ್ಲಿ ದೇಶವಿರೋಧಿ ಮನಸ್ಥಿತಿ ಇರುವ ಯುವಕರು ಪ್ಯಾಲೆಸ್ಟೀನ್ ಬಾವುಟ ಹಿಡಿದು ಓಡಾಡಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಈ ಬಗ್ಗೆ ಎಸ್ಪಿ ಮಾತನಾಡಿದ್ದು, ಬಾವುಟ ಹಿಡಿದು ಓಡಾಡಿರುವವರ ಬೈಕ್ ನಂಬರ್ ಪತ್ತೆಯಾಗಿದೆ. ಕೂಡಲೇ ಅವರನ್ನು ಬಂಧಿಸುತ್ತೇವೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article