ಪ್ರಜಾಸ್ತ್ರ ಸುದ್ದಿ
ಚಿಕ್ಕೋಡಿ(Chokkodi): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪುರಸಭೆ(Municipal) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದರ ಜೊತೆಗೆ ಅಷ್ಟೇ ಅಚ್ಚರಿಯ ಬೆಳವಣಿಗೆ ನಡೆದಿದೆ. ಅದೇನು ಅಂದರೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದಾಗಿರುವುದು. 20ನೇ ವಾರ್ಡ್ ಬಿಜೆಪಿ(BJP) ಸದಸ್ಯೆ ವೀಣಾ ಕವಟಗಿಮಠ ಅಧ್ಯಕ್ಷರಾಗಿ ಹಾಗೂ 8ನೇ ವಾರ್ಡ್ ಕಾಂಗ್ರೆಸ್(Congress) ಸದಸ್ಯ ಇರ್ಫಾನ್ ಬೇಪಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ರಾಜಕೀಯ ಎದುರಾಳಿಗಳಾಗಿರುವ ಬಿಜೆಪಿ, ಕಾಂಗ್ರೆಸ್ ಇಲ್ಲಿ ಒಂದಾಗಿವೆ.
ಇನ್ನೊಂದು ವಿಶೇಷ ಅಂದರೆ ಈ ಇಬ್ಬರು ಸದಸ್ಯರು ಇದೆ ಮೊದಲ ಬಾರಿಗೆ ಪುರಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಮೊದಲ ಬಾರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ. 23 ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 10 ಜನರಿದ್ದಾರೆ. ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿ, ವೀಠಾ ಕವಟಗಿಮಠ ಅವರ ಪತಿ ಜಗದೀಶ ಅವರ ತೆರೆಯ ಹಿಂದಿನ ರಾಜಕೀಯದಿಂದಾಗಿ ರಾಜಕೀಯ ಬದ್ಧ ವೈರಿಗಳಾಗಿರುವ ಕಾಂಗ್ರೆಸ್-ಬಿಜೆಪಿ ಇಲ್ಲಿ ಒಟ್ಟಾಗಿವೆ ಎಂದು ಹೇಳಲಾಗುತ್ತಿದೆ.