ಪ್ರಜಾಸ್ತ್ರ ಸುದ್ದಿ
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಎಲ್2 ಎಂಪುರಾನ್’ ಸಿನಿಮಾ ಅಬ್ಬರಿಸುತ್ತಿದೆ. ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳು ಇರುವುದರಿಂದ ಸಿನಿಮಾ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ. ಮೊದಲ ದಿನದ ಕಲೆಕ್ಷನ್ ನಲ್ಲಿಯೇ ಸಿನಿಮಾ ಅಬ್ಬರಿಸಿದೆಯಂತೆ. ಮೊದಲ ದಿನಲೇ 22 ಕೋಟಿ ರೂಪಾಯಿ ಕಲಕ್ಷೆನ್ ಮಾಡಿದೆ ಎಂದು ಸಿನಿಮಾ ವಲಯದಿಂದ ಕೇಳಿ ಬಂದಿದ್ದು, ಮಲಯಾಳಂನಲ್ಲಿ ಸಿನಿಮಾವೊಂದರ ಈ ಮಟ್ಟದ ಕಲೆಕ್ಷನ್ ಮೊದಲು ಎನ್ನುತ್ತಿದ್ದಾರೆ.
ಮೋಹನ್ ಲಾಲ್ ಅವರ ಲುಸಿಫರ್ ಚಿತ್ರ 6.50 ಕೋಟಿ, ಪೃಥ್ವಿರಾಜ್ ಸುಕುಮಾರನ್ ನಟನೆಯ ಗೋಟ್ ಲೈಫ್ 8.95 ಕೋಟಿ ರೂಪಾಯಿ ಗಳಿಕೆ ಬಿಗ್ ಓಪನಿಂಗ್ ಆಗಿತ್ತು. ಇದೆಲ್ಲವನ್ನೂ ಇದೀಗ ಎಲ್2 ಎಂಪುರಾನ್ ಧೂಳಿಪಟ ಮಾಡಿದೆ. ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡದಿಂದ ಮೊದಲ ದಿನ 50 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆಯಂತೆ. ನೋಡಿದವರಿಂದ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತಿದ್ದು, ಯುಗಾದಿ, ರಂಜಾನ್ ರಜೆಗಳು ಇರುವುದಿಂದ ಇನ್ನೂ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಲಿದೆ.