ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬೇಸಿಗೆ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮಗಳು ಬೀರಲಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಆರೋಗ್ಯ ಇಲಾಖೆ ಸೂಚಿಸಿದೆ. ಮಾರ್ಚ್ ಹಾಗೂ ಮೇ ಅವಧಿ ನಡುವೆ ತಾಪಮಾನ ಹೆಚ್ಚಾಗಲಿದೆ. ಬಿಸಿಗಾಳಿ ಬೀಸಲಿದೆ. ಮಕ್ಕಳು, ಹಿರಿಯರು, ಹೊರಗಡೆ ಕೆಲಸ ಮಾಡುವ ಕಾರ್ಮಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಲಾಗಿದೆ.
ಆಗಾ ನೀರು ಕುಡಿಯಬೇಕು. ಇದರಿಂದ ನಿರ್ಜಲೀಕರಣವನ್ನು ತಪ್ಪಿಸಬಹುದು. ಪ್ರಯಾಣದ ಸಂದರ್ಭದಲ್ಲಿ ನೀರಿನ ಬಾಟಲ್ ತೆಗೆದುಕೊಂಡು ಹೋಗುವುದನ್ನು ಮರೆಯಬಾರದು. ಮಜ್ಜಿಗೆ, ಹಣ್ಣಿನ ಜ್ಯೂಸ್, ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ ಸೇರಿದಂತೆ ಬೇಸಿಗೆ ಕಾಲಕ್ಕೆ ತಕ್ಕದಾದ ಹಣ್ಣುಗಳನ್ನು ಸೇವನೆ ಮಾಡಬೇಕು. ಹೊರಗೆ ಹೋಗುವಾಗ ಟೋಪಿ, ಛತ್ರಿ, ಟವಲ್ ಅಥವ ಮಾಸ್ಕ್ ಬಳಸುವುದು ಒಳ್ಳೆಯದು. ಆದಷ್ಟು ಮಧ್ಯಾಹ್ನದ ಕಾರ್ಯಕ್ರಮಗಳನ್ನು ಸಂಜೆ ಅಥವ ಮುಂಜಾನೆಗೆ ಸಿದ್ಧಪಡಿಸಿಕೊಳ್ಳಿ. ಹೀಗೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಲಾಗಿದೆ.