ಪ್ರಜಾಸ್ತ್ರ ಸುದ್ದಿ
ಪರ್ತ್(Parth): ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ಆಲೌಟ್ ಆಗಿದೆ. ಆಸೀಸ್ ನ ಹಝಲ್ ವುಡ್ ದಾಳಿ ಭಾರತದ ಬ್ಯಾಟರ್ ಗಳು ವಿಕೆಟ್ ಒಪ್ಪಿಸಿದ ಹೋದರು. ಹೀಗಾಗಿ ಮೊದಲ ದಿನವೇ ಆಲೌಟ್ ಆಗಿದೆ. ಪಾದಾರ್ಪಣೆ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ 41 ರನ್ ಗೆ ಔಟ್ ಆದ. ಪಂತ್ 37, ಕೆ.ಎಲ್ ರಾಹುಲ್ 26 ರನ್ ಬಿಟ್ಟರೆ ಉಳಿದವರು ಆಟ ನಡೆಯಲಿಲ್ಲ.
ಆಸ್ಟ್ರೇಲಿಯಾ ಪರ ಹಝಲ್ ವುಡ್ 4 ವಿಕೆಟ್ ಪಡೆದು ಸಂಭ್ರಮಿಸಿದ. ಮಿಚಲ್ ಸ್ಟ್ರಾರ್ಕ್, ನಾಯಕ ಕಮಿನ್ಸ್, ಮಿಚಲ್ ಮಾರ್ಸ್ ತಲಾ 2 ವಿಕೆಟ್ ಪಡೆದರು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆತಿಥ್ಯ ತಂಡ ಸಹ 38 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕವಾಝಾ 8, ನಾತನ್ 10, ಸ್ಟೀವ್ ಸ್ಮಿತ್ 0, ಹೆಟ್ 11 ರನ್ ಭಾರಿಸಿ ಔಟ್ ಆದರು. ಇದರಲ್ಲಿ ನಾಯಕ ಜಸ್ಪ್ರೀತ್ ಬೂಮ್ರಾ 3 ವಿಕೆಟ್ ಪಡೆದು ಆಘಾತ ನೀಡಿದರು. ಹರ್ಷಿತ್ ರಾಣಾ 1 ವಿಕೆಟ್ ಪಡೆದು ಮೊದಲ ಪಂದ್ಯದಲ್ಲಿ ಖಾತೆ ತೆರೆದರು. ಮಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.