ಪ್ರಜಾಸ್ತ್ರ ಸುದ್ದಿ
ಬ್ರಿಸ್ಟೇನ್(Gabba): ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುತ್ತಿದೆ. ಶನಿವಾರ 3ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಆದರೆ, ಮೊದಲ ದಿನವೇ ಮಳೆಗೆ ಬಲಿಯಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ಗೆ ಇಳಿಯಿತು. 13.2 ಓವರ್ ಗಳಲ್ಲಿ 28 ರನ್ ಗಳೊಂದಿಗೆ ಆಸೀಸ್ ಆಡುತ್ತಿತ್ತು. ಆಗ ಮಳೆ ಶುರುವಾಗಿದೆ.
ಮಳೆ ಮುಂದುವರೆದಿದ್ದು, ಅಂಪೈರ್ ಗಳು ಪಂದ್ಯವನ್ನು ಸ್ಥಗಿತಗೊಳಿಸಿದ್ದಾರೆ. ಖವಾಜ್ 19, ನಾಥನ್ 4 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ. ಆಸೀಸ್ ತಂಡದಲ್ಲಿ ಬೋಲ್ಯಾಂಡ್ ಬದಲಿಗೆ ಹಾಜಲ್ ವುಡ್ ಗೆ ಅವಕಾಶ ನೀಡಲಾಗಿದೆ. ಭಾರತ ತಂಡದಲ್ಲಿ ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್, ರವಿಚಂದ್ರನ್ ಅಶ್ವಿನ್ ಬದಲಾಗಿ ರವೀಂದ್ರ ಜಡೇಜಾ ಬಂದಿದ್ದಾರೆ.