Ad imageAd image

ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯಕ್ಕೆ 2ನೇ ದಿನವೂ ಮಳೆ ಅಡ್ಡಿ

ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ.

Nagesh Talawar
ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯಕ್ಕೆ 2ನೇ ದಿನವೂ ಮಳೆ ಅಡ್ಡಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕಾನ್ಪುರ್(Khanpur): ಭಾರತ ಹಾಗೂ ಬಾಂಗ್ಲಾದೇಶ(Ind vs Ban test) ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ. ಶನಿವಾರವೂ ಮಳೆ ಕಾಣಿಸಿಕೊಂಡಿದೆ ಹಾಗೂ ಮೋಡ ಕವಿದ ವಾತಾವರಣದಿಂದ ಸ್ಪಷ್ಟವಾದ ಬೆಳಕಿಲ್ಲ. ಹೀಗಾಗಿ ಭೋಜನ ವಿರಾಮವನ್ನು ಬೇಗ ತೆಗೆದುಕೊಳ್ಳಲಾಯಿತು. ಆದರೂ ಮಳೆ(Rain) ಮುಂದುವರೆದ ಪರಿಣಾಮ 2ನೇ ದಿನವೂ ಮುಕ್ತಾಯವಾಗಿದೆ. ಮುಂಜಾನೆ 9.30ಕ್ಕೆ ಪಂದ್ಯ ಆರಂಭವಾಗಿತ್ತು.

ಬಾಂಗ್ಲಾ ಶುಕ್ರವಾರ ಹಾಗೂ ಶನಿವಾರ ಸೇರಿ ಕೇವಲ 35 ಓವರ್ ಗಳನ್ನಷ್ಟೇ ಆಡಿದೆ. ಇದರಲ್ಲಿ 107 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಮೊಯಿನುಲ್ ಹಕ್ 40 ರನ್, ಮುಷ್ಪಿಕರ್ ರೆಹ್ಮಾನ್ 6 ರನ್ ಗಳೊಂದಿಗೆ ಆಡುತ್ತಿದ್ದಾರೆ. ಭಾರತ ಪರ ಆಕಾಶ್ ದೀಪ್ 2 ವಿಕೆಟ್, ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article