ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಪಾಕ್ ವಿರುದ್ಧ ಭಾರತ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪಾಕ್ ನ 16 ಯುಟ್ಯೂಬ್ ಚಾನಲ್ ಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಭಾರತೀಯ ಸೇನೆ, ಭಾರತೀಯ ಭದ್ರತಾ ಪಡೆ ಸೇರಿದಂತೆ ಪ್ರಚೋದನಕಾರಿಯಾದ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 16 ಯುಟ್ಯೂಬ್ ಚಾನಲ್ ನಿಷೇಧಿಸಲಾಗಿದೆ.
ಡಾನ್ ನ್ಯೂಸ್, ಸಾಮ್ನಾ ಟಿವಿ, ದಿ ಪಾಕಿಸ್ತಾನ್ ರೆಫರನ್ಸ್, ಸಮಾ ಸ್ಪೋಟ್ಸ್, ಇರ್ಷಾದ್ ಭಟ್ಟಿ, ಬೊಲ್ ನ್ಯೂಸ್, ರಾಝಿ ನಾಮ್, ಉಮರ್ ಚೀಮಾ ಎಕ್ಸ್ ಕ್ಲೂಸಿವ್, ಎಆರ್ ವೈ ನ್ಯೂಸ್, ಜಿಯೋ ನ್ಯೂಸ್, ಅಸ್ಮಾ ಶಿರಾಜಿ, ಸುನೋ ನ್ಯೂಸ್, ಉಜೈರ್ ಕ್ರಿಕೆಟ್, ರಫ್ತಾರ್, ಮುನೀಬ್ ಫಾರೂಕ್ ಹಾಗೂ ಜಿಎನ್ಎನ್ ಹೆಸರಿನ 16 ಯುಟ್ಯೂಬ್ ಚಾನಲ್ ಗಳನ್ನು ನಿಷೇಧಿಸಲಾಗಿದೆ. ಏಪ್ರಿಲ್ 22ರಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.