ಪ್ರಜಾಸ್ತ್ರ ಸುದ್ದಿ
ಕಾನ್ಪುರ್(Kanpur): ಎರಡು ದಿನ ಮಳೆಯಿಂದಾಗಿಯೇ ಸರಿಯಾಗಿ ಪಂದ್ಯವಾಡಲು ಆಗದೆ ಭಾರತ ಹಾಗೂ ಬಾಂಗ್ಲಾ(IND vs BAN) ಆಟಗಾರರು ಪರದಾಡಿದರು. ಅಂತಿಮವಾಗಿ ಬಾಂಗ್ಲಾ ಮೊದಲ ಇನ್ನಿಂಗ್ಸ್ ನಲ್ಲಿ 233 ರನ್ ಗಳಿಗೆ ಆಲೌಟ್ ಆಯಿತು. ಭಾರತ ತನ್ನ ಬ್ಯಾಟಿಂಗ್ ಶುರು ಮಾಡಿ 285 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಡಿಕ್ಲೀಯರ್ ಮಾಡಿಕೊಂಡಿದೆ. ಹೀಗಾಗಿ 52 ರನ್ ಮುನ್ನಡೆ ನೀಡಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಭಾರತ ಗೆಲ್ಲಲು ಸಿದ್ಧವಾಗಿದೆ.
ಇನ್ನು ನಾಯಕ ರೋಹಿತ್(Rohit Sharma) ಶರ್ಮಾ ಹಾಗೂ ಯುವ ಆಟಗಾರ ಯಶಸ್ವಿ(Yashasvi Jaiswal) ಜೈಸ್ವಾಲ್ ಜೋಡಿ ಭರ್ಜರಿ ಆಟವಾಡಿ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ 50 ರನ್ ಗಳಿಸಿದೆ. ಈ ಜೋಡಿ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿ ಐತಿಹಾಸಿಕ ದಾಖಲೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 26 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದ ದಾಖಲೆ ಮುರಿಯಿತು. ಅಂತಿಮವಾಗಿ ಜೈಸ್ವಾಲ್ 72 ರನ್, ರೋಹಿತ್ 23, ಗಿಲ್ 39, ಕೊಹ್ಲಿ 47, ಕೆ.ಎಲ್ ರಾಹುಲ್ 68 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್, ಮೆಹಿದ್ಯಾ ಹಸನ್ ಮಿರ್ಜಾ ತಲಾ 4 ವಿಕೆಟ್ ಪಡೆದು ಮಿಂಚಿದರು. ಹಸನ್ ಮಹ್ಮುದ್ 1 ವಿಕೆಟ್ ಪಡೆದರು.
52 ರನ್ ಗಳ ಮುನ್ನಡೆ ನೀಡಿದ ರನ್ ಗಳನ್ನು ಚೇಸ್ ಮಾಡುತ್ತಿರುವ ಬಾಂಗ್ಲಾ ಪಡೆ 11 ಓವರ್ ಗಳಲ್ಲಿ 2 ವಿಕೆಟ್ ಗಳಿಗೆ 26 ರನ್ ಗಳಿಸಿದೆ. ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಮೂರು ಮಾದರಿಯ ಕ್ರಿಕೆಟ್ ನಲ್ಲಿ 50ಕ್ಕೂ ಹೆಚ್ಚು ಬ್ಯಾಟರ್ ಗಳ ವಿಕೆಟ್ ಪಡೆದ ಸಾಧನೆ ಮಾಡಿದರು.