ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್(MCG): ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 184 ರನ್ ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಪ್ಯಾಟ್ ಕಮಿನ್ಸ್ ಬಳಗ 2-1 ಮುನ್ನಡೆ ಸಾಧಿಸಿದೆ. 340 ರನ್ ಟಾರ್ಗೆಟ್ ನೀಡಲಾಗಿತ್ತು. ಅನುಭವಿ ಆಟಗಾರರ ಮುಂದುವರೆದ ವೈಫಲ್ಯದಿಂದಾಗಿ 155 ರನ್ ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು. ಯುವ ಆಟಗಾರ ಜೈಸ್ವಾಲ್ 84 ರನ್ ಗಳ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಆಸ್ಟ್ರೇಲಿಯಾ ಪರ ನಾಯಕ ಕಮಿನ್ಸ್ 3, ಸ್ಕಾಟ್ ಬೊಂಲ್ಡ್ 3, ನಾಥನ್ 2 ಹಾಗೂ ಸ್ಟಾರ್ಕ್, ಹೆಡ್ ತಲಾ 1 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಕೊನೆಯ ಪಂದ್ಯ ಸಿಡ್ನಿಯಲ್ಲಿ ಜನವರಿ 3ರಿಂದ ನಡೆಯಲಿದೆ. ಜೈಸ್ವಾಲ್ 84, ಪಂತ್ 30 ರನ್ ಗಳ ಎರಡಂಕಿ ಬಿಟ್ಟರೆ ಉಳಿದವರು ಒಂದಂಕಿಗೆ ಔಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿದರು. ಹೀಗಾಗಿ ಬಾಕ್ಸಿಂಗ್ ಡೇ ಪಂದ್ಯ ಗೆದ್ದ ಕಾಂಗೂರು ಪಡೆ ಸಂಭ್ರಮಿಸಿತು.