ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಹಾಗೂ ಇವರಿಗೆ ಬೆಂಬಲ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ, ಭವಿಷ್ಯದಲ್ಲಿ ನಡೆಯುವ ಭಯೋತ್ಪಾದಕ ದಾಳಿಯನ್ನು ಯುದ್ದಕ್ಕೆ ಸಮ ಎಂದು ಭಾರತ ಹೇಳಿದೆ ಅಂತಾ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಉಗ್ರರ ಕೃತ್ಯಕ್ಕೆ ಇನ್ಮುಂದೆ ಸರಿಯಾದ ಉತ್ತರ ನೀಡುವ ಕೆಲಸವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ.
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 22 ಜನರು ಮೃತಪಟ್ಟಿದ್ದರು. ಹೀಗಾಗಿ ಭಾರತ ಆಪರೇಷನ್ ಸಿಂಧೂರ ಮೂಲಕ ಉಗ್ರರ 9 ಶಿಬಿರಗಳನ್ನು ಉಡೀಸ್ ಮಾಡಿತು. ನಂತರ ಎರಡು ದೇಶಗಳ ನಡುವೆ ಯುದ್ಧ ವಾತಾವರಣ ಮೂಡಿತು. ಎರಡೂ ಕಡೆಯಿಂದ ವೈಮಾನಿಕ, ಡ್ರೋನ್ ದಾಳಿ ನಡೆದಿದ್ದು, ಪಾಕಿಸ್ತಾನದ ಎಲ್ಲ ಕೃತ್ಯಗಳನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿ, ಎಲ್ಲವನ್ನು ಧ್ವಂಸಗೊಳಿಸಿದೆ.