ಪ್ರಜಾಸ್ತ್ರ ಸುದ್ದಿ
ಲೀಡ್ಸ್(Leeds): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. 5 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿದ ಇಂಗ್ಲೆಂಡ್ ಗೆದ್ದು ಬೀಗಿದೆ. ಝಾಕ್ 65, ಬೆನ್ ಡೆಕೆಟ್ ಭರ್ಜರಿ 149, ರೂಟ್ ಅಜೇಯ 53, ಸ್ಮಿತ್ ಅಜೇಯ 44 ರನ್ ಗಳಿಂದಾಗಿ ಬೆನ್ ಸ್ಟೋಕ್ ಪಡೆ ವಿಜಯ ದಾಖಲಿಸಿದೆ. ಭಾರತ ಪರ ಪ್ರಸಿದ್ಧ ಕೃಷ್ಣ ಹಾಗೂ ಶ್ರಾದ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಜಡೇಜಾ 1 ವಿಕೆಟ್ ಪಡೆದರು.
ಭಾರತ ತಂಡದ ಬ್ಯಾಟ್ಸ್ ಮನ್ ಗಳು ಅಬ್ಬರಿಸಿದರೂ ಗೆಲುವು ದಕ್ಕಿಸಿಕೊಳ್ಳಲು ಆಗಲಿಲ್ಲ. ಎರಡು ಇನ್ನಿಂಗ್ಸ್ ನಲ್ಲಿ 5 ಶತಕಗಳು ಬಂದಿವೆ. ಮೊದಲ ಇನ್ನಿಂಗ್ಸ್ ನಲ್ಲಿ ಜೈಸ್ವಾಲ್ 101, ನಾಯಕ ಗಿಲ್ 147, ಪಂತ್ 134 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಕೆ.ಎಲ್ ರಾಹುಲ್ 137, ಪಂತ್ 118 ರನ್ ಗಳಿಸಿ ಅಬ್ಬರಿಸಿದರು. ಆದರೆ ಅದ್ಯಾಕೋ ಗೆಲುವು ಮಾತ್ರ ಟೀಂ ಇಂಡಿಯಾ ತಂಡಕ್ಕೆ ಒಲಿಯಲಿಲ್ಲ.