ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಇಲ್ಲಿನ ಈಡನ್ ಗಾರ್ಡ್ ನಲ್ಲಿ ನಡೆದ ಸೌಥ್ ಆಫ್ರಿಕಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾಗಿದ್ದು, ಭಾರತ ಹೀನಾಯವಾಗಿ ಸೋಲು ಕಂಡಿದೆ. 30 ರನ್ ಗಳಿಂದ ಸೌಥ್ ಆಫ್ರಿಕಾ ವಿಜಯ ಸಾಧಿಸಿದೆ. ಇದರೊಂದಿಗೆ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
2ನೇ ಇನ್ನಿಂಗ್ಸ್ ನಲ್ಲಿ 153 ರನ್ ಗಳಿಗೆ ಆಫ್ರಿಕಾ ತಂಡ ಆಲೌಟ್ ಆಗಿತ್ತು. ಹೀಗಾಗಿ 124 ರನ್ ಗಳ ಟಾರ್ಗೆಟ್ ನೀಡಿತ್ತು. ಇದನ್ನು ಮುಟ್ಟುವಲ್ಲಿ ನಾಯಕ ಶುಭನಂ ಗಿಲ್ ಪಡೆ ವಿಫಲವಾಗಿದೆ. ಬೌಲರ್ ಗಳಿಗೆ ಸಹಕಾರಿಯಾದ ಮೈದಾನ ಬ್ಯಾಟರ್ ಗಳನ್ನು ಪೆವಲಿಯನ್ ಪರೇಡ್ ನಡೆಸುವಂತೆ ಮಾಡಿತು. ಹೀಗಾಗಿ ಎರಡು ತಂಡಗಳ ಸ್ಫೋಟಕ ಬ್ಯಾಟ್ಸಮನ್ ಗಳಿಂದಲೂ ರನ್ ಬರಲಿಲ್ಲ. ಭಾರತ ಕೇವಲ 93 ರನ್ ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.
ಎರಡು ಇನ್ನಿಂಗ್ಸ್ ಸೇರಿ 8 ವಿಕೆಟ್ ಪಡೆದ ಸೌಥ್ ಆಫ್ರಿಕಾದ ಸೈಮನ್ ಹಾರ್ಮರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಭಾರತ ಪರ ಜಸ್ಪ್ರೀತ್ ಬೂಮ್ರಾ ಮೊದಲ ಇನ್ನಿಂಗ್ಸ್ ನಲ್ಲಿ 5, 2ನೇ ಇನ್ನಿಂಗ್ಸ್ 1 ವಿಕೆಟ್ ಪಡೆದರು. ಜಡೇಜಾ 4 ವಿಕೆಟ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ತಲಾ 4 ವಿಕೆಟ್ ಪಡೆದರು. ಆಫ್ರಿಕಾ ಪರ ಸೈಮನ್ ಹಾರ್ಮರ್ 8, ಮಾರ್ಕ್ ಜಾನ್ಸನ್ 5, ಕೇಶವ್ ಮಹಾರಾಜ್ 3 ವಿಕೆಟ್ ಪಡೆದರು.




