Ad imageAd image

ಮೂರೇ ದಿನದಲ್ಲಿ ಮುಗಿದ ಟೆಸ್ಟ್.. ಸರಣಿ ಸೋತ ಭಾರತ

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 245 ರನ್ ಗಳಿಗೆ ಆಲೌಟ್ ಆಗಿದೆ.

Nagesh Talawar
ಮೂರೇ ದಿನದಲ್ಲಿ ಮುಗಿದ ಟೆಸ್ಟ್.. ಸರಣಿ ಸೋತ ಭಾರತ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಪುಣೆ(Pune): ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 245 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ 113 ರನ್ ಗಳಿಂದ ಸೋತಿದೆ. ಇದರೊಂದಿಗೆ 3 ಟೆಸ್ಟ್ ಪಂದ್ಯಗಳ ಸರಣಿ ಕಿವೀಸ್ ಪಾಲಾಗಿದೆ. ಮೂರೇ ದಿನಕ್ಕೆ ಟೆಸ್ಟ್ ಪಂದ್ಯ ಮುಗಿದಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ 77, ಆಲ್ ರೌಂಡರ್ ಜಡೇಜಾ 42 ರನ್ ಬಿಟ್ಟರೆ ಉಳಿದವರು ವಿಫಲರಾದರು. ಹೀಗಾಗಿ 2ನೇ ಪಂದ್ಯವೂ ಸೋಲುವಂತಾಯಿತು.

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 259 ರನ್ ಗಳಿಸಿತ್ತು. ಭಾರತ 156 ರನ್ ಗಳಿಗೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸ್ ನಲ್ಲಿ 255 ರನ್ ಗಳಿಗೆ ಕಿವೀಸ್ ಪಡೆ ಸರ್ವಪತನವಾಗಿತ್ತು. ಇದರಿಂದಾಗಿ 358 ರನ್ ಗಳ ಗುರಿ ನೀಡಿತ್ತು. ಇನ್ನು 2 ದಿನಗಳ ಸಮಯ ಸಹ ಇತ್ತು. ಆದರೆ, ಮಿಚಲ್ ಸ್ಟನ್ನರ್ ಮಾರಕ ಬೌಲಿಂಗ್ ನಿಂದಾಗಿ ಟೀಂ ಇಂಡಿಯಾ 245 ರನ್ ಗಳಿಗೆ ಆಲೌಟ್ ಆಯಿತು. ಸ್ಟನ್ನರ್ 6 ವಿಕೆಟ್ ಪಡೆದು ಮಿಂಚಿದ. ಅಜಜ್ ಪಟೇಲ್ 2, ಗ್ಲೇನ್ ಪ್ಲಿಪ್ಸ್ 1 ವಿಕೆಟ್ ಪಡೆದ.

WhatsApp Group Join Now
Telegram Group Join Now
Share This Article