ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕಳೆದೊಂದು ವಾರದಿಂದ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಕದನ ವಿರಾಮಕ್ಕೆ ಎರಡು ದೇಶಗಳು ಒಪ್ಪಿವೆ ಎಂದು ವಿದೇಶಾಂಗ ಸಚಿವಾಲಯ ಘೋಷಿಸಿದೆ. ಶನಿವಾರ ಸಂಜೆ 5 ಗಂಟೆಗೆ ಅನ್ವಯವಾಗುವಂತೆ ಕದನ ವಿರಾಮ ಘೋಷಿಸಲಾಗಿದೆ. ಈ ಮೂಲಕ ಪಾಕ್ ಬೆಂಬಲಿತ ಭಯೋತ್ಪಾದಕರಿಂದ ಭಾರತದ 23 ಜನರು ಹತ್ಯೆಯಾಗಿದ್ದಕ್ಕೆ ಪ್ರತಿಕಾರವಾಗಿ ಭಾರತ ಉಗ್ರರ ಹಡೆಮುರಿ ಕಟ್ಟುವ ಕೆಲಸ ಮಾಡುತ್ತಿತ್ತು.
ಅಮೆರಿಕ ಅಧ್ಯಕ್ಷತೆಯಲ್ಲಿ ರಾತ್ರಿಪೂರ್ತಿ ನಡೆದ ಸಭೆಯಲ್ಲಿ ಎರಡು ದೇಶಗಳು ಸರ್ವಾನುಮತದಿಂದ ಕದನ ವಿರಾಮ ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ಡೂನಾಲ್ಡ್ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಭಾರತದಿಂದ ಆಪರೇಷನ್ ಸಿಂಧೂರ ಮೂಲಕ ಪಾಕ್ ಗೆ ತಕ್ಕ ಉತ್ತರ ನೀಡಿತ್ತು. 100ಕ್ಕೂ ಅಧಿಕ ಭಯೋತ್ಪಾದಕರನ್ನು ಹತ್ಯೆ ಮಾಡಿತು.