ಪ್ರಜಾಸ್ತ್ರ ಸುದ್ದಿ
ಆಡಿಲೇಡ್(Adelaide): ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ, 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದೆ. ರೋಹಿತ್ ಶರ್ಮಾ 73, ಶ್ರೇಯಸ್ ಅಯ್ಯರ್ 61 ಹಾಗೂ ಅಕ್ಷರ್ ಪಟೇಲ್ 44 ರನ್ ಗಳಿಂದಾಗಿ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ. ನಾಯಕ ಗಿಲ್ 9, ವಿರಾಟ್ ಕೊಹ್ಲಿ 0, ಕೆ.ಎಲ್ ರಾಹುಲ್ 11, ವಾಷಿಂಗ್ಟನ್ ಸುಂದರ್ 12 ರನ್ ಗಳಿಸಿ ವಿಫಲರಾದರು.
ನಿತೀಶ್ ಕುಮಾರ್ ರೆಡ್ಡಿ 8, ಹರ್ಷಿತ್ ರಾಣಾ 24, ಅರ್ಷದೀಪ್ ಸಿಂಗ್ 13 ರನ್ ಗಳಿಸಿದರು. ಆಸೀಸ್ ಪರ ಆಡಂ ಜಂಪಾ 4, ಬ್ರೆಟ್ಲೇಟ್ 3 ವಿಕೆಟ್ ಪಡೆದು ಸಂಭ್ರಮಿಸಿದರು. ಮಿಚಲ್ ಸ್ಟ್ರಾಕ್ 2 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಬ್ಯಾಟಿಂಗ್ ಪ್ರಾರಂಭವಿಸಿದ್ದು 10.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ.