ಪ್ರಜಾಸ್ತ್ರ ಸುದ್ದಿ
ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ 1-1 ಸಮಬಲ ಸಾಧಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆಸೀಸ್ ಮೊದಲು ಬ್ಯಾಟ್ ಮಾಡಿತು. ಟೀಮ್ ಡೇವಿಡ್ 74 ಹಾಗೂ ಮಾರ್ಕಸ್ ಸ್ಟೋನಿಸ್ 64 ರನ್ ಗಳ ಬಿರುಸಿನ ಆಟದಿಂದಾಗಿ 186 ರನ್ ಗಳಿಸಿತು.
ಸ್ಫೋಟಕ ಬ್ಯಾಟ್ಸಮನ್ ಟ್ರವಿಸ್ ಹೆಡ್ 6, ನಾಯಕ ಮಿಚಲ್ ಮಾರ್ಸ್ 11, ಜೋಶ್ ಇಂಗ್ಲಿಷ್ 1 ರನ್ ಗಳಿಸಿ ಆರಂಭಿಕ ಆಘಾತ ಎದುರಿಸಿತು. ಮಿಚಲ್ ಓವೆನ್ ಸಹ ಡಕೌಟ್ ಆದರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಭಾರತ ಪರ ಅರ್ಷದೀಪ್ ಸಿಂಗ್ 3 ಹಾಗೂ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು ಮಿಂಚಿದರು. ಶಿವಂ ದುಬೆ 1 ವಿಕೆಟ್ ಪಡೆದರು.
ಸವಾಲಿನ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾದ ಯುವ ಪಡೆಯಿಂದ ದೊಡ್ಡ ಕಾಣಿಕೆ ಬರಲಿಲ್ಲ. ವಾಷಿಂಗ್ಟನ್ ಸುಂದರ್ ಅಜೇಯ 49 ರನ್ ಬಿಟ್ಟರೆ ಉಳಿದವರಿಂದ ಭಾರಿ ರನ್ ಬರಲಿಲ್ಲ. ಅಭಿಷೇಕ್ ಶರ್ಮಾ 25, ಗಿಲ್ 15, ನಾಯಕ ಸೂರ್ಯಕುಮಾರ್ ಯಾದವ್ 24, ತಿಲಕ್ ವರ್ಮಾ 29, ಅಕ್ಷರ್ ಪಟೇಲ್ 17, ಜಿತೇಶ್ ಶರ್ಮಾ ಅಜೇಯ 22 ರನ್ ಗಳಿಸಿದರು. 18.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಗೆಲುವಿನ ದಡ ಸೇರಿದರು. 3 ವಿಕೆಟ್ ಪಡೆದ ಅರ್ಷದೀಪ್ ಸಿಂಗ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




