Ad imageAd image

5ನೇ ಬಾರಿಗೆ ಇಂಡಿಯಾ ಹಾಕಿ ಟೀಂಗೆ ಏಷ್ಯನ್ ಚಾಂಪಿಯನ್ಸ್ ಕಿರೀಟ

ಚೀನಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟೂರ್ನಿಯಲ್ಲಿ ಚೀನಾ ವಿರುದ್ಧ ಭಾರತ ಗೆದ್ದು ಬೀಗಿದೆ. 1-0 ಅಂತರದಿಂದ ಗೆಲುವು ಸಾಧಿಸುವ

Nagesh Talawar
5ನೇ ಬಾರಿಗೆ ಇಂಡಿಯಾ ಹಾಕಿ ಟೀಂಗೆ ಏಷ್ಯನ್ ಚಾಂಪಿಯನ್ಸ್ ಕಿರೀಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೀನಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್(asian hockey champions trophy 2024) ಟೂರ್ನಿಯಲ್ಲಿ ಚೀನಾ ವಿರುದ್ಧ ಭಾರತ ಗೆದ್ದು ಬೀಗಿದೆ. 1-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ಸ್ ಪಟ್ಟವನ್ನು ಭಾರತ ತನ್ನಲ್ಲಿಯೇ ಉಳಿಸಿಕೊಂಡಿತು. ಪ್ಯಾರಿಸ್ ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ಸಾಧನೆ ಮಾಡಿತ್ತು. ಪಂದ್ಯದ ನಾಲ್ಕನೇ ಕ್ವಾರ್ಟರ್ ನಲ್ಲಿ ಜುಗ್ರಾಜ್ ಸಿಂಗ್ ಗೋಲು ಗಳಿಸಿ ಮುನ್ನಡೆ ತಂದು ಕೊಟ್ಟರು. ಅಂತಿಮವಾಗಿ ಚೀನಾ ಒಂದೂ ಗೋಲು ಗಳಿಸಲು ಸಾಧ್ಯವಾದಂತೆ ನೋಡಿಕೊಳ್ಳಲು ಆಯ್ತು.

ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಸೋಲಿಸಿ ಮೊದಲ ಬಾರಿಗೆ ಚೀನಾ ಫೈನಲ್ ತಲುಪಿತ್ತು. ತವರು ನೆಲದಲ್ಲಿ ವಿಜಯ ಸಾಧಿಸುವ ಮೂಲಕ ಹೊಸ ದಾಖಲೆ ಬರೆಯಬೇಕು ಎಂದುಕೊಂಡಿತ್ತು. ಇದಕ್ಕೆ ಹರ್ಮನ್ ಪ್ರೀತ್ ಸಿಂಗ್ ಪಡೆ ಅವಕಾಶ ಕೊಡದೆ ತಾನೇ ಚಾಂಪಿಯನ್ಸ್ ಆಗಿ ಮುಂದುವರೆಯಿತು.

WhatsApp Group Join Now
Telegram Group Join Now
Share This Article