ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಪಿಎಲ್(IPL) ಚುಟುಕು ಕ್ರಿಕೆಟ್ ಟೂರ್ನಿಗೆ ಇನ್ನು ಕೆಲ ದಿನ ಬಾಕಿ ಉಳಿದಿದೆ. ಈಗಾಗ್ಲೇ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ನಾಯಕರನ್ನು ಸಹ ನೇಮಕ ಮಾಡಲಾಗಿದೆ. 10 ತಂಡಗಳಲ್ಲಿ 9 ತಂಡಗಳಿಗೆ ಭಾರತೀಯ ಆಟಗಾರರು ಕ್ಯಾಪ್ಟನ್ ಆಗಿದ್ದಾರೆ. ಒಂದು ತಂಡಕ್ಕೆ ವಿದೇಶಿ ಆಟಗಾರ ಮಾತ್ರ ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ಈ ವರ್ಷದ ಐಪಿಎಲ್ ನಲ್ಲಿ ದೇಶಿಯ ಆಟಗಾರರ ಅಬ್ಬರ ಜೋರಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಯುವ ಆಟಗಾರ ರಜತ್ ಪಾಟೀದಾರ್ ನಾಯಕನಾಗಿ ಆಯ್ಕೆ ಆಗುವ ಮೂಲಕ ಮೊದಲ ಬಾರಿಗೆ ಕ್ಯಾಪ್ಟನ್ ಸ್ಥಾನ ಅಲಂಕರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಗೆ(CSK) ಋತುರಾಜ್ ಗಾಯಕವಾಡ್, ಮುಂಬೈ ಇಂಡಿಯನ್ಸ್ ಗೆ(MI) ಹಾರ್ದಿಕ್ ಪಾಂಡ್ಯ, ಕೊಲ್ಕತ್ತಾ ನೈಟ್ ರೈಡರ್ಸ್ ಗೆ(KKR) ಅಜಿಂಕ್ಯ ರಹಾನೆ, ಪಂಜಾಬ್ ಕಿಂಗ್ಸ್ ಗೆ(PKXII) ಶ್ರೇಯಸ್ ಅಯ್ಯರ್, ಡೆಲ್ಲಿ ಕ್ಯಾಪಿಟಲ್ಸ್ ಗೆ(DC) ಅಕ್ಷರ್ ಪಾಟೀಲ, ರಾಜಸ್ಥಾನ ರಾಯಲ್ಸ್ ಗೆ(RR) ಸಂಜು ಸ್ಯಾಮ್ಸನ್, ಗುಜರಾತ್ ಜೈಂಟ್ಸ್ ಗೆ(GT) ಶುಭಮನ್ ಗಿಲ್ ನಾಯಕರಾಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್(SRH) ತಂಡಕ್ಕೆ ಮಾತ್ರ ಪ್ಯಾಟ್ ಕಮಿನ್ಸ್ ನಾಯಕರಾಗಿದ್ದಾರೆ.
ಐಪಿಎಲ್ ಆರಂಭದ ವರ್ಷಗಳಲ್ಲಿ ಭಾರತೀಯ ಆಟಗಾರರು ಎಲ್ಲ ತಂಡಗಳಿಗೆ ನಾಯಕರಾಗಿದ್ದರು. ನಂತರ ವಿದೇಶಿ ಆಟಗಾರರು ಆ ಸ್ಥಾನವನ್ನು ಅಲಂಕರಿಸಿದ್ದರು. ಈಗ ನಮ್ಮ ನೆಲದ ಆಟಗಾರರೆ ನಾಯಕರಾಗಿದ್ದಾರೆ. ರಜತ್ ಪಟೀದಾರ್ ಹಾಗೂ ಅಕ್ಷರ್ ಪಟೇಲ್ ಮೊದಲ ಬಾರಿಗೆ ಕ್ಯಾಪ್ಟನ್ ಕ್ಯಾಪ್ ತೊಟ್ಟಿದ್ದಾರೆ. ಈ ಬಾರಿಯಾದರೂ ಆರ್ ಸಿಬಿ ಕಪ್ ಗೆಲ್ಲುತ್ತಾ ಅನ್ನೋ ಕುತೂಹಲವಿದೆ.