ಪ್ರಜಾಸ್ತ್ರ ಸುದ್ದಿ
ಶ್ರೀಲಂಕಾದಲ್ಲಿ ನಡೆದ ಅಂಧ ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಇತಿಹಾಸ ನಿರ್ಮಿಸಿದೆ. ಗ್ರಾಮೀಣ ಭಾಗದಿಂದ ಬಂದ ಆಟಗಾರ್ತಿಯರು, ವಸತಿ ನಿಲಯದಲ್ಲಿದ್ದುಕೊಂಡು ಓದು, ಬರಹ ಮಾಡುತ್ತಿರುವವರು, ಕಡು ಬಡತನಲ್ಲಿ ಬೆಳೆದವರು ಇಂದು ಟಿ-20 ವಿಶ್ವಕಪ್ ಜಯಿಸುವುದರೊಂದಿಗೆ ಹೊಸ ಸಾಧನೆ ಮಾಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 5 ವಿಕೆಟ್ ನಷ್ಟಕ್ಕೆ 114 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಭಾರತದ ಬೌಲರ್ ಗಳನ್ನು ಹೆಚ್ಚು ರನ್ ಕೊಡದೆ ಅಲ್ಪ ಮೊತ್ತಕ್ಕೆ ಕುಸಿವಂತೆ ಮಾಡಿದರು. ನಂತರ ಬ್ಯಾಟ್ ಮಾಡಿದ ಇಂಡಿಯಾ ತಂಡ ಕೇವಲ 12.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿ ಗೆಲುವಿನ ದಡ ಸೇರಿತು. ಭಾರತ ಪರ ಪೌಲ್ ಸರೆನ್ ಅಜೇಯ 44 ರನ್ ಗಳಿಸಿದರು.
9 ರಾಜ್ಯದ 16 ಆಟಗಾರ್ತಿಯರು: ಭಾರತ ತಂಡದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಓಡಿಶಾ, ದೆಹಲಿ, ಆಸ್ಸಾಂ, ಬಿಹಾರ್ ರಾಜ್ಯದ 16 ಆಟಗಾರ್ತಿಯರಿದ್ದರು. ಇಂಡಿಯಾ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಯುಎಸ್ಎ ಸೇರಿ 6 ತಂಡಗಳು ಟೂರ್ನಿಯಲ್ಲಿದ್ದವು. ದೆಹಲಿ, ಬೆಂಗಳೂರಿನಲ್ಲಿ ಪಂದ್ಯಗಳು ನಡೆದವು. ನಾಕೌಟ್ ಹಂತದ ಪಂದ್ಯಗಳು ಶ್ರೀಲಂಕಾಗೆ ಸ್ಥಳಾಂತರಗೊಂಡವು.




