ಪ್ರಜಾಸ್ತ್ರ ಸುದ್ದಿ
ದುಬೈ(Dubai): ಇಲ್ಲಿನ ಇಂಟರ್ ನ್ಯಾಷನ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಭಾರತಕ್ಕೆ 265 ರನ್ ಟಾರ್ಗೆಟ್ ನೀಡಿತ್ತು. ಇದನ್ನು ಭಾರತ 48.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು. 84 ರನ್ ಗಳಿಸಿದ ವಿರಾಟ್ ಕೊಹ್ಲಿ ಮತ್ತೊಮ್ಮೆ ತಾವು ಚೇಸ್ ಮಾಡುವಲ್ಲಿ ವಿಫಲವಾಗಿಲ್ಲ ಎಂದು ತೋರಿಸಿದರು. ಕೊಹ್ಲಿಗೆ ಶ್ರೇಯಸ್ ಅಯ್ಯರ್ ಸಾಥ್ ನೀಡಿದ. ಹೀಗಾಗಿ ಈ ಜೋಡಿ 90 ರನ್ ಗಳ ಜೊತೆಯಾಟವಾಡಿತು.
ಶ್ರೇಯಸ್ ಅಯ್ಯರ್ 45, ಕೆ.ಎಲ್ ರಾಹುಲ್ ಅಜೇಯ 42, ಪಾಂಡ್ಯೆ 28 ರನ್ ಗಳಿಸಿದರು. ಗಿಲ್ 8 ರನ್ ಗೆ ಔಟ್ ವೈಫಲ್ಯ ಕಂಡರು. ನಾಯಕ ರೋಹಿತ್ ಶರ್ಮಾ 28 ರನ್ ಗಳಿಸಿದರು. ಎಂದಿನಂತೆ ಕೊಹ್ಲಿ ತಮ್ಮ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು. ಅದನ್ನು ಕೆ.ಎಲ್ ರಾಹುಲ್ ಗೆಲುವಿನ ದಡ ದಾಟಿಸಿದರು. ಈ ಮೂಲಕ 5ನೇ ಬಾರಿಗೆ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಗೆ ಬಂದಿತು.
ಐಸಿಸಿ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 265 ರನ್ ಬಾರಿಸಿ ಗಲುವು ದಾಖಲಿಸಿದ ಮೊದಲ ತಂಡ ಭಾರತವಾಯಿತು. ಇನ್ನು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 9ರಲ್ಲಿ ಗೆದ್ದಿದೆ. ಒಂದು ಟೈ ಆಗಿದೆ. ಹೀಗಾಗಿ ಈ ಮೈದಾನದಲ್ಲಿ ಒಂದೇ ಪಂದ್ಯ ಸೋತಿಲ್ಲ. ಹೀಗೆ ಹಲವು ದಾಖಲೆಗಳನ್ನು ಟೀಂ ಇಂಡಿಯಾ ಮಂಗಳವಾರ ಸಂಜೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯ ಗೆದ್ದು ಸಾಧಿಸಿತು.
ಚೇಸಿಂಗ್ ನಲ್ಲಿ ಕಿಂಗ್ ಕೊಹ್ಲಿ ದಾಖಲೆ: ಟೀಂ ಇಂಡಿಯಾ ರನ್ ಮಿಷನ್ ವಿರಾಟ್ ಕೊಹ್ಲಿ ಚೇಸಿಂಗ್ ನಲ್ಲಿ ತಾವು ಟಾಪ್ ಎಂದು ಮತ್ತೆ ಸಾಬೀತು ಮಾಡಿದರು. ಅಲ್ಲದೇ ಚೇಸಿಂಗ್ ನಲ್ಲಿ ಅತ್ಯಂತ ವೇಗವಾಗಿ 8 ಸಾವಿರ ರನ್ ಗಳಿಸಿದ 2ನೇ ಬ್ಯಾಟರ್ ಆದರು. ಸಚನ್ ತಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದು, 8720 ರನ್ ಗಳಿಸಿದ್ದಾರೆ. ಸಚಿನ್ ರನ್ ರೇಟ್ 43.22 ಇದ್ದರೆ ಕೊಹ್ಲಿ ರನ್ ರೇಟ್ 60 ಇದ್ದು, ಈ ಸರಾಸರಿಯಲ್ಲಿ 8 ಸಾವಿರ ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡರು. ಇದೆ ವೇಳೆ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.