ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅಪ್ರಾಪ್ತೆಯನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಅನ್ನಪೂರ್ಣ ವಾಡಿಯ ರಾಯಲ್ ಸ್ಕೂಲ್ ಹತ್ತಿರ ಈ ಘಟನೆ ನಡೆದಿದೆ. ಮಹಮ್ಮದ್ ಖಾಜಿ ಹಾಗೂ ಮಹಮ್ಮದ್ ಅಟ್ಮಾಸ್ ಅನ್ನೋ ಯುವಕರ ಗುಂಪಿನ ನಡುವೆ ಗಲಾಟೆಯಾಗಿದೆ.
ಈ ಗಲಾಟೆಯಲ್ಲಿ ಚಾಕು ಇರಿಯಲಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಮ್ಮದ್ ಅಟ್ಮಾಸ್, ಆಕೆ ನನ್ನ ಸ್ನೇಹಿತನ ಲವ್ವರ್. ಅವಳ ಸಹವಾಸ ಮಾಡಬೇಡ ಎಂದು ಖಾಜಿಯೊಂದಿಗೆ ಗಲಾಟೆ ಮಾಡಿದ್ದಾನೆ. ಆಗ ಎರಡು ಕಡೆ ಹೊಡಿಬಡಿ ನಡೆದು ಚಾಕು ಇರಿತದ ತನಕ ಹೋಗಿದ್ದು, ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ.