ಪ್ರಜಾಸ್ತ್ರ ಸುದ್ದಿ
ವಿಜಯನಗರ(Vijayanagara): ಜಿಲ್ಲೆಯ ಹೊಸಪೇಟೆ ತಾಲೂಕಿನ ವ್ಯಾಪ್ತಿಯಲ್ಲಿರುವ ತುಂಗಭದ್ರಾ(tungabhadra dam) ಜಲಾಶಯದ 19ನೇ ಗೇಟ್ ಚೈನ್ ಕಟ್ ಆದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ದುರಸ್ತಿ ಕೆಲಸ ನಡೆದಿದ್ದು, ತಾತ್ಕಾಲಿಕ ಗೇಟ್ ಅಳವಡಿಕೆ ಯಶಸ್ವಿಯಾಗಿದೆ ಎಂದು ಶನಿವಾರ ತಿಳಿದು ಬಂದಿದೆ. ಇದರಿಂದಾಗಿ ಒಂದು ಅಡಿಯಷ್ಟು ನೀರು ಮೇಲಕ್ಕೆ ಹರಿಯುತ್ತಿದೆ.
ಜಿಂದಾಲ್ ಕಂಪನಿ ತಯಾರಿಸಿದ ಒಂದು ಗೇಟ್ ಎಲಿಮೆಂಟ್ ಜೋಡಿಸಲಾಗಿದೆ. ಇನ್ನು ಎರಡು ಜೋಡಿಸಲಾಗುತ್ತೆ. ನಂತರ ಹಿಂದೂಸ್ಥಾನ್ ಇಂಡಸ್ಟ್ರಿಸ್ ಹಾಗೂ ನಾರಾಯಣ್ ಇಂಡಸ್ಟ್ರಿಸ್ ತಯಾರಿಸಿದ ತಲಾ ಒಂದು ಗೇಟ್ ಎಲಿಮೆಂಟ್ ಕೂಡಿಸಲಾಗುತ್ತೆ. ಇದೆಲ್ಲವೂ ಮುಗಿದ ತಕ್ಷಣ 19ನೇ ಗೇಟ್ ನಿಂದ ನೀರು ಸಂಪೂರ್ಣ ಬಂದ್ ಆಗಲಿದೆ. ಈ ಕೆಲಸ ಇವತ್ತು ಮುಗಿಯುತ್ತೋ, ಭಾನುವಾರ ಮುಗಿಯುತ್ತೋ ಅನ್ನೋ ಕುತೂಹಲವಿದೆ.