ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಸಾಂಕ್ರಾಮಿ(infectious diseases) ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದಿಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಾದೇಶಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಪಂಚಾಯ್ತಿಗೆ ಪತ್ರ ಬರೆದಿದ್ದಾರೆ. ಆರೋಗ್ಯ ಸಹಾಯಕರೊಂದಿಗೆ ನೀರಿನ ಮೂಲಗಳಿಗೆ ಟಿಸಿಎಲ್ ಪೌಡರ್ ನಿಂದ ಕ್ಲೋರಿನೆಷನ್ ಮಾಡಲು ತಿಳಿಸಬೇಕು. ವಾರಕ್ಕೊಮ್ಮೆ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು. ಚರಂಡಿ, ಬೋರ್ ವೆಲ್ ಸುತ್ತಮುತ್ತ ಮಿಲಾಥಿನ್ ಪೌಡರ್ ಹಾಕಲು ತಿಳಿಸಬೇಕು.
ತಿಪ್ಪೆ ಗುಂಡಿಗಳನ್ನು ಊರಿನಿಂದ ಹೊರಗೆ ಮಾಡಲು ತಿಳಿಸಬೇಕು. ತಗ್ಗು ಬಿದ್ದು ನೀರು ನಿಂತ ಪ್ರದೇಶಗಳನ್ನು ದುರಸ್ತಿ ಮಾಡಿಸಬೇಕು. ಈ ಮೂಲಕ ಮಲೇರಿಯಾ(malaria), ಡೆಂಗ್ಯೂ(Dengue), ಚಿಕನ್(Chickenpox) ಗುನ್ಯ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಜೊತೆಗೆ ವಾಂತಿ, ಭೇಧಿ ರೋಗಗಳ ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವ ಕಡೆ ಫಾಗಿಂಗ್ ಮಾಡಬೇಕು. ಕಲುಷಿತ ನೀರು ಕುಡಿಯದೆ ಶುದ್ಧ ನೀರು ಕುಡಿಯುವ ಕುರಿತು, ನೀರನ್ನು ಸಂಸ್ಕರಿಸುವ ಕುರಿತು ಡಂಗುರ ಸಾರಿಸಿ ಜನರಿಗೆ ತಿಳಿಸಬೇಕು ಎಂದು ಹೇಳಲಾಗಿದೆ.