Ad imageAd image

ಅನುವಾದಕರಾದ ಡಾ.ಮಲರ್ ವಿಳಿ.ಕೆ, ಮಧುಮಿತಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕನ್ನಡದ ಖ್ಯಾತ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಎನ್ನುವ ಕೃತಿಯನ್ನು ತಮಿಳಿಗೆ ಅನುವಾದ ಮಾಡಲಾಗಿದೆ.

Nagesh Talawar
ಅನುವಾದಕರಾದ ಡಾ.ಮಲರ್ ವಿಳಿ.ಕೆ, ಮಧುಮಿತಗೆ ಅಂತಾರಾಷ್ಟ್ರೀಯ ಪ್ರಶಸ್ತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಧುರೈ(madurai): ಕನ್ನಡದ ಖ್ಯಾತ ಲೇಖಕ ನಾಡೋಜ ಬರಗೂರು(baraguru ramachandrappa) ರಾಮಚಂದ್ರಪ್ಪ ಅವರ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಎನ್ನುವ ಕೃತಿಯನ್ನು ತಮಿಳಿಗೆ ಅನುವಾದ ಮಾಡಲಾಗಿದೆ. ಇದಕ್ಕೆ 2ನೇ ಬಹುಮಾನ ಬಂದಿದ್ದು, ಅನುವಾದಕರಾದ(Writers) ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕಿ ಡಾ.ಮಲರ್ ವಿಳಿ. ಕೆ ಹಾಗೂ ತಮಿಳು ನಾಡಿನ ಕವಯಿತ್ರಿ ಮಧುಮಿತ ಅವರಿಗೆ ಬಹುಮಾನ ನೀಡಿ ಗೌರವಿಸಲಾಗಿದೆ.

ಆಗಸ್ಟ್ 15, 2024ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮಿಳುನಾಡಿನ ಮಧುರೈ ಹತ್ತಿರದಲ್ಲಿರುವ ಕಂಬಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ‘ಭಾರದಿ ತಮಿಳ್ ಇಲಕ್ಕಿಯ ಪೇರವೈ’ ಅನ್ನೋ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಭಾಷ್ ಚಂದ್ರ(subhash chandra bose) ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಅಧಿಕಾರಿಯಾಗಿದ್ದ, ಪರಮ ರಾಷ್ಟ್ರಭಕ್ತ ಕೆ.ಟಿ. ಸೋಮನಾದನ್ ಇವರು ನೇತಾಜಿಯವರ ಭಾಷಣಗಳನ್ನು ಅನುವಾದಿಸುತ್ತಿದ್ದರಂತೆ. ಇವರ ಪುತ್ರ ಭಾರದನ್, ಕಂಬಂನಲ್ಲಿ 1980ರಲ್ಲಿ ‘ಭಾರದಿ ತಮಿಳ್ ಇಲಕ್ಕಿಯ ಪೇರವೈ’ ಎಂಬ ಪ್ರತಿಷ್ಠಾನ ಸ್ಥಾಪಿಸಿ ಕಳೆದ 18 ವರ್ಷಗಳಿಂದ ಅರ್ಹ ಕೃತಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article