Ad imageAd image

ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಉಲ್ಟಾ ಧ್ವಜಾರೋಹಣ?

ಎಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಆದರೆ, ಕೆಲವೊಂದು ಕಡೆ ಒಂದಲ್ಲ ಒಂದು ಯಡವಟ್ಟುಗಳು ಆಗುತ್ತವೆ. ಆದರೂ ಅದಕ್ಕೆ ಸಂಬಂಧಿಸಿದವರು ಕೂಡಲೇ

Nagesh Talawar
ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಉಲ್ಟಾ ಧ್ವಜಾರೋಹಣ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಎಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಆದರೆ, ಕೆಲವೊಂದು ಕಡೆ ಒಂದಲ್ಲ ಒಂದು ಯಡವಟ್ಟುಗಳು ಆಗುತ್ತವೆ. ಆದರೂ ಅದಕ್ಕೆ ಸಂಬಂಧಿಸಿದವರು ಕೂಡಲೇ ಎಚ್ಚೆತ್ತುಕೊಳ್ಳದೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಾರೆ. ಅಂತಹದ್ದೆ ಒಂದು ಘಟನೆ ಪಟ್ಟಣದಲ್ಲಿರುವ ಪುರಸಭೆ ಕಚೇರಿ ಮೇಲೆ ನೆರವೇರಿಸಿದ ಧ್ವಜಾರೋಹಣದ ವೇಳೆ ನಡೆದಿದೆ. ಆದರೂ ಅದನ್ನು ಸರಿಪಡಿಸುವ ಕೆಲಸ ಮಾಡದೆ ಹೋಗಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ ಘಟನೆ ಸಿಂದಗಿ ಪುರಸಭೆಯಲ್ಲಿ ನಡೆದಿದೆ. 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಾವುಟ ಉಲ್ಟಾ ಹಾರಿಸಲಾಗಿದೆ. ಇದನ್ನು ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಗಮನಿಸದೆ ಹೋಗಿರುವುದು ನಿಜಕ್ಕೂ ವಿಷಾದನೀಯ. ಈ ಬಗ್ಗೆ ಸ್ಪಷ್ಟನೆ ಕೇಳಲು ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಫೋನ್ ಮಾಡಿ ಮಾತನಾಡಿದಾಗ ಅವರು ಹೇಳಿದ್ದು,..

‘ನನಗೆ ಆಲಮೇಲದ ಚಾರ್ಜ್ ಸಹ ಇದೆ. ಇಲ್ಲಿ ಮುಂಜಾನೆ ಧ್ವಜಾರೋಹಣ ಮಾಡುವಾಗ ಸರಿಯಾಗಿಯೇ ಇದೆ. ಈ ಬಗ್ಗೆ ನಮ್ಮಲ್ಲಿ ವಿಡಿಯೋ ಸಹ ಇದೆ. ಆದರೆ, ನಮ್ಮ ಕಚೇರಿ ಸುತ್ತಮುತ್ತ ಅಂಗಡಿಗಳಿದ್ದು, ಮೇಲೆ ಹತ್ತಲು ಅವಕಾಶವಿದೆ. ಯಾರಾದರೂ ಕಿಡಿಗೇಡಿಗಳು ಮಾಡಿರಬಹುದು’.- ಸುರೇಶ ನಾಯಕ, ಮುಖ್ಯಾಧಿಕಾರಿಗಳು, ಸಿಂದಗಿ ಪುರಸಭೆ

‘ದಿವ್ಯನಿರ್ಲಕ್ಷ್ಯದಿಂದ ಆದ ಘಟನೆ. ಇದರಿಂದಾಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ. ಈ ಬಗ್ಗೆ ಹಿಂದಿನ ದಿನ ನಡೆದ ರ್ಯಾಲಿ ವೇಳೆ ನಾನು ಮಾತನಾಡಿದ್ದೆ. ಧ್ವಜಾರೋಹಣ ಸಂದರ್ಭದಲ್ಲಿ ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು. ಉಲ್ಟಾ ಧ್ವಜಾರೋಹಣದಿಂದ ಅಗೌರವ ತೋರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು’.- ಅಶೋಕ ಅಲ್ಲಾಪೂರ, ಅಧ್ಯಕ್ಷರು, ಸಿಂದಗಿ ನಗರ ಸುಧಾರಣೆ ವೇದಿಕೆ

ಉಪ ನೋಂದಣಾಧಿಕಾರಿ ಕಚೇರಿ ಮುಂಭಾಗದಲ್ಲಿನ ದೃಶ್ಯ.

ಮುಖಾಧಿಕಾರಿಗಳು ಹೇಳುವಂತೆ ಕಿಡಿಗೇಡಿಗಳು ಆ ರೀತಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ಪುರಸಭೆ ಇರುವುದು ಊರಿನ ಮಾರುಕಟ್ಟೆ ಮಧ್ಯದಲ್ಲಿ. ಜನನಿಬಿಡಿ ಪ್ರದೇಶವಾಗಿದ್ದು, ಇದು ಹೇಗೆ ಸಾಧ್ಯ ಏನು ಅನ್ನೋದು ತಿಳಿದು ಬರಬೇಕಿದೆ. ಇನ್ನು ತಾಲೂಕು ಆಡಳಿತ ಕಚೇರಿ ಆವರಣದಲ್ಲಿರುವ ಉಪ ನೋಂದಣಿಧಿಕಾರಿ ಕಚೇರಿ ಮುಂಭಾಗದಲ್ಲಿ ನೆರವೇರಿಸಿದ ಧ್ವಜಾರೋಹಣದಲ್ಲಿ ಬಾವುಟ ಧ್ವಜ ಕಂಬದಿಂದ ಸ್ವಲ್ಪ ಕೆಳಗೆ ಇರುವುದು ಸಹ ಕಂಡು ಬಂದಿದೆ. ಒಟ್ಟಿನಲ್ಲಿ ಪಟ್ಟಣದಲ್ಲಿ ಒಂದಲ್ಲ ಒಂದು ಯಡವಟ್ಟು ಧಜ್ವಾರೋಹಣ ಸಂದರ್ಭದಲ್ಲಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು.

WhatsApp Group Join Now
Telegram Group Join Now
Share This Article