ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಪಿಎಲ್-2025 ಟೂರ್ನಿ ಭರ್ಜರಿಯಾಗಿ ನಡೆಯುತ್ತಿದೆ. ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗ್ಲೇ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಗುರುವಾರ ಸಂಜೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ. ಆರ್ ಸಿಬಿ ನಾಯಕ ರಜತ್ ಪಟೀದಾರ್, ಸ್ಟಾರ್ ಪ್ಲೇಯರ್ ಕೊಹ್ಲಿ, ಸಾಲ್ಟ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಯುವ ಪಡೆ ಸಹ ಭರ್ಜರಿ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದೆ.
ಇನ್ನು ಡೆಲ್ಲಿ ಆಡಿರುವ 3 ಪಂದ್ಯಗಳಲ್ಲಿ ಮೂರರಲ್ಲಿಯೂ ಗೆಲುವು ಸಾಧಿಸಿ ಅಗ್ರ ಸ್ಥಾನದಲ್ಲಿದೆ. ಮೊದಲ ಬಾರಿಗೆ ನಾಯಕನಾಗಿ ಡೆಲ್ಲಿ ತಂಡ ಮುನ್ನಡೆಸುತ್ತಿರುವ ಅಕ್ಷರ್ ಪಟೇಲ್ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಇವರ ಗೆಲುವಿನ ಓಟಕ್ಕೆ ಆರ್ ಸಿಬಿ ಬ್ರೇಕ್ ಹಾಕುತ್ತಾ ಅನ್ನೋ ಕುತೂಹಲವಿದೆ. ಯಾಕಂದರೆ ಕಳೆದ ಪಂದ್ಯ ಮುಂಬೈ ವಿರುದ್ಧ ನಡೆದಾಗ ಕೊನೆಯ ಓವರ್ ತನಕ ಹೋಗಿ ಸಾಕಷ್ಟು ಕಿಕ್ ನೀಡಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆಯೂ ಸಾಕಷ್ಟು ಕುತೂಹಲವಿದೆ. ಐಪಿಎಲ್ ಇತಿಹಾಸದಲ್ಲಿ ಆರ್ ಸಿಬಿ ಹಾಗೂ ಡೆಲ್ಲಿ 31 ಬಾರಿ ಮುಖಾಮುಖಿಯಾಗಿದ್ದು 19ರಲ್ಲಿ ಬೆಂಗಳೂರು, 11ರಲ್ಲಿ ಡೆಲ್ಲಿ ಜಯ ಸಾಧಿಸಿವೆ. ಸಂಜೆ 7.30ಕ್ಕೆ ಪಂದ್ಯ ಶುರುವಾಗಲಿದೆ.