ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತ ಹಾಗೂ ಪಾಕಿಸ್ತಾನ ನಡುವೆ ಇದೀಗ ಯುದ್ಧದ ವಾತಾವರಣವಿದೆ. ಮೇ 6 ಹಾಗೂ 7ರ ನಡುವೆ ಭಾರತ ಆಪರೇಷನ್ ಸಿಂಧೂರ ನಡೆಸಿ ಉಗ್ರರ 9 ಶಿಬಿರಗಳನ್ನು ಉಡೀಸ್ ಮಾಡಲಾಗಿದೆ. ಗುರುವಾರ ಸಂಜೆ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತು. ಇದನ್ನು ಭಾರತ ವಿಫಲಗೊಳಿಸಿದೆ. ಅಲ್ಲದೆ ಸಂಜೆ ನಡೆದ ಪಂಜಾಬ್ ಹಾಗೂ ಡೆಲ್ಲಿ ನಡುವಿನ ಪಂದ್ಯ ರದ್ದಾಗಿದೆ. ಬಿಸಿಸಿಐ ತುರ್ತು ಸಭೆ ಸಹ ನಡೆಸಿದೆ.
ಐಪಿಎಲ್-2025ರ ಟೂರ್ನಿಯ 74 ಪಂದ್ಯಗಳ ಪೈಕಿ 58 ಪಂದ್ಯಗಳು ನಡೆದಿವೆ. ಲೀಗ್ ಹಂತದ ಕೆಲವು ಪಂದ್ಯಗಳು ಮುಗಿದರೆ ಉಳಿದಿದ್ದು ಪ್ಲೇ ಆಫ್ ಪಂದ್ಯಗಳು. ಇಂದು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯ ಸಭೆ ನಡೆಯಲಿದೆ. ಸಧ್ಯಕ್ಕೆ ಟೂರ್ನಿಯನ್ನು ಮುಂದೂಡಬೇಕಾ, ರದ್ದುಗೊಳಿಸಬೇಕಾ ಅನ್ನೋ ಚರ್ಚೆ ನಡೆಯಲಿದೆ. ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಾಂಜಾಬ್-ಡೆಲ್ಲಿ ಪಂದ್ಯದ ವೇಳೆ ಪವರ್ ಕಟ್ ಆಗಿ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಇದಕ್ಕೂ ಮೊದಲು ಉಗ್ರರಿಂದ ಬಾಂಬ್ ದಾಳಿ ಬೆದರಿಕೆ ಬಂದಿತ್ತು. ಪಂದ್ಯ ರದ್ದುಗೊಳಿಸಲಾಯಿತು. ಕ್ರಿಕೆಟ್ ಪ್ರೇಮಿಗಳು ಆತಂಕದಿಂದ ಸ್ಟೇಡಿಯಂನಿಂದ ಓಡಿದ್ದಾರೆ. ಸಧ್ಯ ದೇಶದಲ್ಲಿ ಯುದ್ಧದ ವಾತಾವರಣವಿದ್ದು ಈ ಸಮಯದಲ್ಲಿ ಐಪಿಎಲ್ ನಡೆಸೋದು ಎಷ್ಟು ಸೂಕ್ತ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.