ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಐಆರ್ ಸಿಟಿಸಿಯಲ್ಲಿ ಹಗರಣ ನಡೆದಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಪತ್ನಿ, ಮಾಜಿ ಸಿಎಂ ರಾಬ್ಡಿದೇವಿ, ಪುತ್ರ ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ವಿರುದ್ಧ ನ್ಯಾಯಾಲಯ ಸೋಮವಾರ ದೋಷಾರೋಪ ಮಾಡಿದೆ. ಬಿಹಾರ್ ಚುನಾವಣೆಯ ಹೊತ್ತಿನಲ್ಲಿ ಈ ಬೆಳವಣಿಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ಈ ಮೂವರ ವಿರುದ್ಧ ಮೋಸದ ಆರೋಪ ಮಾಡಿದ್ದಾರೆ. ಸಿಬಿಐ ಚಾರ್ಜ್ ಶೀಟ್ ಪ್ರಕಾರ 2004 ರಿಂದ 2014ರ ನಡುವೆ ಅಕ್ರಮ ನಡೆದಿದೆ. ಪುರಿ ಹಾಗೂ ರಾಂಚಿಯಲ್ಲಿರುವ ರೈಲ್ವೆ ಇಲಾಖೆಯ ಬಿಎನ್ಆರ್ ಹೊಟೇಲ್ ಗಳನ್ನು ಐಆರ್ ಸಿಟಿಗೆ ವರ್ಗಾಯಿಸಿ, ನಂತರ ಅದರ ನಿರ್ವಹಣೆಯನ್ನು ಪಟ್ನಾ ಮೂಲದ ಸುಜಾತ ಹೋಟೆಲ್ ಪ್ರೈವೆಟ್ ಲಿಮಿಟೆಡ್ ಗೆ ವಹಿಸಲಾಗಿತ್ತು.