ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ವೇಳೆ ದಾಳಿ ನಡೆಸಿದ್ದಾಗ ಗಲ್ಫ್ ರಾಷ್ಟ್ರಗಳ ಕ್ಷಮೆಯನ್ನು ಇರಾನ್ ಕೇಳಿದೆ. ಇರಾನ್ ಅಧ್ಯಕ್ಷ ಮಸೂದ್ ಪಜೆಶ್ ಕಿಯಾನ್ ಕ್ಷಮೆ ಕೇಳಿದ್ದಾರೆ. ನೆರೆಯ ದೇಶಗಳ ಮೇಲೆ ನಾವು ಮುಂದೆಂದೂ ದಾಳಿ ಮಾಡುವುದಿಲ್ಲ. ಆ ಕಡೆಯಿಂದ ದಾಳಿ ಮಾಡದ ಹೊರತು ನಾವು ದಾಳಿ ಮಾಡುವುದಿಲ್ಲ ಎಂದಿದ್ದಾರೆ.
ನೆರೆಯ ದೇಶಗಳ ಮೇಲೆ ದಾಳಿ ಮಾಡದೆ ಇರಲು ಇರಾನ್ ಮಧ್ಯಂತರ ನಾಯಕತ್ವ ಮಂಡಳಿ ತೀರ್ಮಾನಿಸಿದೆ. ದಾಳಿ ನಡೆಸಿದ್ದಕ್ಕೆ ನನ್ನ ಹಾಗೂ ದೇಶದ ಪರವಾಗಿ ನೆರೆಯ ದೇಶಗಳ ಕ್ಷಮೆ ಕೇಳಿತ್ತೇನೆ. ಇರಾನ್ ಶರಣಾಗತಿ ಬಗ್ಗೆ ಶತ್ರು ರಾಷ್ಟ್ರಗಳು ಮರೆತು ಬಿಡಬೇಕು ಎಂದಿದ್ದಾರೆ. ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧದಲ್ಲಿ ಗಲ್ಫ್ ದೇಶಗಳ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿತ್ತು.




