ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಮುಂಜಾನೆ ನಾಲ್ವರು ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ನಗರದ ವಿವಿಧ ಕಡೆ ಈ ದಾಳಿ ನಡೆದಿದೆ. ಬೆಂಗಳೂರು ಹಾಗೂ ಗೋವಾದಿಂದ ಬಂದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಗಣೇಶಪುರದಲ್ಲಿರುವ ಅಶೋಕ್ ಐರಾನ್ ಕಂಪನಿ ಮಾಲೀಕ ಅಶೋಕ್ ಹುಂಗರವಾಡಿ, ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್, ಪುಷ್ಪದತ್ತ ದೊಡ್ಡಣ್ಣವರ ಹಾಗೂ ವಿನೋದ್ ದೊಡ್ಡಣ್ಣವರ ಎನ್ನುವ ಉದ್ಯಮಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ದೊಡ್ಡಣ್ಣವರ ಸಹೋದರರ ಕುಟುಂಬ ಗ್ರೈನೆಟ್, ಐರಾನ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶಕ್ಕೂ ರಫ್ತಾಗುತ್ತೆ. ಎರಡು ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ.