Ad imageAd image

ಸಿಂದಗಿ: ಡೀಸೆಲ್ ಇಲ್ಲದೆ ಬಸ್ ಗಳು ನಿಂತಿಲ್ಲವೆಂದು ಸ್ಪಷ್ಟನೆ

ಜಿಲ್ಲೆಯ ಸಿಂದಗಿ ಬಸ್ ಡಿಪೋದಲ್ಲಿ ಡೀಸೆಲ್ ಇಲ್ಲದೇ ಬಸ್‌ಗಳು ಡಿಪೋದಲ್ಲಿಯೇ ನಿಲ್ಲುವಂತಾಗಿ ಪ್ರಯಾಣಿಕರಿಗೆ ತೊಂದರೆಯಾಗಿರುವ ಕುರಿತು ಸುದ್ದಿ ಜಾಲತಾಣದಲ್ಲಿ

Nagesh Talawar
ಸಿಂದಗಿ: ಡೀಸೆಲ್ ಇಲ್ಲದೆ ಬಸ್ ಗಳು ನಿಂತಿಲ್ಲವೆಂದು ಸ್ಪಷ್ಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲೆಯ ಸಿಂದಗಿ ಬಸ್ ಡಿಪೋದಲ್ಲಿ ಡೀಸೆಲ್ ಇಲ್ಲದೇ ಬಸ್‌ಗಳು ಡಿಪೋದಲ್ಲಿಯೇ ನಿಲ್ಲುವಂತಾಗಿ ಪ್ರಯಾಣಿಕರಿಗೆ ತೊಂದರೆಯಾಗಿರುವ ಕುರಿತು ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ವರದಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಪಷ್ಠೀಕರಣ ನೀಡಿದ್ದಾರೆ.

ಮೇ.8ರಂದು ಎಚ್‌ಪಿಸಿಎಲ್‌ರವರ ಸರ್ವರ್ ಸಮಸ್ಯೆಯಿಂದಾಗಿ ಇಂಡೆಂಟಿಂಗ್ ಮತ್ತು ಅನ್ ಲೋಡಿಂಗ್ ಸಮಸ್ಯೆಯಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ ವಿಭಾಗದ ಘಟಕಗಳಲ್ಲಿ ಹೆಚ್ಚುವರಿ ದಾಸ್ತಾನು ಇಂಧನವನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಂಡು ಸಿಂದಗಿ ಘಟಕದಲ್ಲಿ ವಾಹನಗಳ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಯಾವುದೇ ಬಸ್‌ಗಳು ಡಿಪೋದಲ್ಲಿ ನಿಂತಿರುವುದಿಲ್ಲ ಹಾಗೂ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article