ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಜೆಪಿಸಿ(ಜಂಟಿ ಸಂಸದೀಯ ಸಮಿತಿ) ಅಂದರೆ ಅದಕ್ಕೊಂದು ಮಾರ್ಗಸೂಚಿ ಇದೆ. ಬರುವುದಕ್ಕೂ ಮೊದಲು ಸರ್ಕಾರಕ್ಕೆ, ಅಧಿಕಾರಿಗಳು ತಿಳಿಸಬೇಕು. ಹುಬ್ಬಳ್ಳಿ ಹಾಗೂ ವಿಜಯಪುರಕ್ಕೆ ಬಂದಿರುವುದು ಜೆಪಿಸಿ ಸಮಿತಿಯೇ ಅಲ್ಲ. ಬಿಜೆಪಿ ಸದಸ್ಯರು ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಸರ್ಕಾರವಿದ್ದಾಗ ಧಾರವಾಡದ ರೈತರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿ ನೋಡಿ ಎಂದರು.
ವಿಜಯಪುರದಲ್ಲಿ ಇದೇ ರೀತಿಯಾಗಿದೆ. ಮುಖ್ಯಮಂತ್ರಿಗಳು ಈಗಾಗ್ಲೇ ನೋಟಿಸ್ ವಾಪಸ್ ಪಡೆಯಲು ಹೇಳಿದ್ದಾರೆ. ಯಾವ ರೈತರ ಜಮೀನು ಕಿತ್ತುಕೊಳ್ಳುವುದಿಲ್ಲ. ಒಕ್ಕಲೆಬ್ಬಿಸುವುದಿಲ್ಲ. ಜೆಪಿಸಿ ಸಮಿತಿ ಎಂದು ಹೇಳಿ ಬಂದಿರುವುದು ಅಧ್ಯಕ್ಷರು ಒಬ್ಬರೆ. ಎಲ್ಲ ಸದಸ್ಯರು ಬರಬೇಕು. ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ ಸದಸ್ಯರೆ ಎಂದು ಪ್ರಶ್ನಿಸಿದರು. ಅಲ್ಲದೆ ಅವರು ಇಲ್ಲಿಗೆ ಬಂದಿರುವುದು ರಾಜಕೀಯ ಮಾಡಲು ಅಂತಾ ವಾಗ್ದಾಳಿ ನಡೆಸಿದರು.