Ad imageAd image

ರಾಜ್ಯ ಅತ್ಯಾಚಾರಿ, ದರೋಡೆ ತಾಣವಾಗುತ್ತಿರುವುದು ಆಘಾತಕಾರಿ: ವಿಜಯೇಂದ್ರ

Nagesh Talawar
ರಾಜ್ಯ ಅತ್ಯಾಚಾರಿ, ದರೋಡೆ ತಾಣವಾಗುತ್ತಿರುವುದು ಆಘಾತಕಾರಿ: ವಿಜಯೇಂದ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕರ್ನಾಟಕ ಅತ್ಯಾಚಾರಿ, ದರೋಡೆಕೋರರ ತಾಣವಾಗುತ್ತಿರುವ ಬೆಳವಣಿಗೆ ಅತ್ಯಂತ ಆಘಾತಕಾರಿಯಾದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸಂಸ್ಕೃತಿ, ಸಂಸ್ಕಾರ, ಸುರಕ್ಷತೆ ಎಂದರೆ ಕರ್ನಾಟಕ ಎನ್ನುವ ಖ್ಯಾತಿ ಪಡೆದಿದೆ. ಈಗ ಅತ್ಯಾಚಾರಿಗಳ, ದರೋಡೆಕೋರರ ತಾಣವಾಗುತ್ತಿರುವುದು ಆಘಾತಕಾರಿ ಎಂದಿದ್ದಾರೆ.

ಕೆ.ಆರ್ ಮಾರುಕಟ್ಟೆ ಹತ್ತಿರ ಒಂಟಿ ಮಹಿಳೆ ಬಸ್ಸಿಗಾಗಿ ನಿಂತಿರುವಾಗ ಸಾಮೂಹಿಕ ಅತ್ಯಾಚಾರ, ದರೋಡೆ ಅತ್ಯಂತ ಹೇಯ ಹಾಗೂ ಅವಮಾನವೀಯ ಘಟನೆ. ಸ್ತ್ರೀ ಕುಲಕ್ಕೆ ರಕ್ಷಣೆ ನೀಡಲು ಸಾಧ್ಯವಾಗದ ಪರಿಸ್ಥಿತಿ ರಾಜ್ಯದ ಕಾನೂನು ಸುವ್ಯವಸ್ಥೆ ಬಂದು ನಿಂತಿದೆ. ಜನಹಿತ, ಸುರಕ್ಷತೆ ಮರೆತಿರುವ ಸರ್ಕಾರದಲ್ಲಿ ಗುಂಪುಗಾರಿಕೆ, ಕಾಂಗ್ರೆಸ್ ಉತ್ಸವಗಳು ನಡೆಯುತ್ತಿವೆ. ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದೆಯೇ? ಗೃಹ ಇಲಾಖೆ ಇದೆಯೇ? ಒಂದು ಸರ್ಕಾರ ಈ ರಾಜ್ಯವನ್ನು ಆಳುತ್ತಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಅಂತಾ ಪೋಸ್ಟ್ ಮಾಡುವ ಮೂಲಕ ಕಿಡಿ ಕಾರುತ್ತಿದ್ದಾರೆ.

WhatsApp Group Join Now
Telegram Group Join Now
Share This Article