ಪ್ರಜಾಸ್ತ್ರ ಸುದ್ದಿ
ನಾಗಪುರ(Nagapura): ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಗುರುವಾರ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಶ್ ಬಟ್ಲರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತ ಸೇರಿಸಬೇಕು ಎನ್ನುವ ಅವರ ಲೆಕ್ಕಾಚಾರವನ್ನು ಟೀಂ ಇಂಡಿಯಾದ ಅನುಭವಿ ಬೌಲರ್ ರವೀಂದ್ರ ಜಡೇಜಾ, ಯುವ ಬೌಲರ್ ರಾಣಾ ಉಲ್ಟಾ ಮಾಡಿದರು. ಹೀಗಾಗಿ 47.4 ಓವರ್ ಗಳಲ್ಲಿ 248 ರನ್ ಗಳಿಗೆ ಆಲೌಟ್ ಆಯಿತು.
ಜಡೇಜಾ ಹಾಗೂ ಹರ್ಷಿತ್ ರಾಣಾ ತಲಾ 3 ವಿಕೆಟ್ ಪಡೆದರು. ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿಯೇ ಹರ್ಷಿತ್ ರಾಣಾ ಮಿಂಚಿದರು. 7 ಓವರ್ ಗಳಲ್ಲಿ 53 ರನ್ ಕೊಟ್ಟರೂ ಪ್ರಮುಖ 3 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು. ನಾಯಕ ಬಟ್ಲರ್ 52, ಜಾಕಬ್ ಬೆಥೆಲ್ 51, ವಿಕೆಟ್ ಕಿಪೇರ್ ಸಾಲ್ಟ್ 43 ರನ್ ಗಳಿಸಿ ತಂಡಕ್ಕೆ ಶಕ್ತಿ ತುಂಬಿದರು. 249 ರನ್ ಗಳ ಗುರಿ ಬೆನ್ನು ಹತ್ತಿರುವ ರೋಹಿತ್ ಶರ್ಮಾ ಬಳಗ 18.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿದೆ. ಗಾಯದ ಸಮಸ್ಯೆಯಿಂದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಆಡುತ್ತಿಲ್ಲ.