ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಬಿಸಿಸಿಐ ನಿರ್ಗಮಿತ ಕಾರ್ಯದರ್ಶಿ ಜಯ್ ಶಾ ಭಾನುವಾರ ಐಸಿಸಿ(ICC) ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಗ್ರೆಗ್ ಬರ್ಕ್ಲೆ ಅಧಿಕಾರ ಅವಧಿ ನವೆಂಬರ್ 30ಕ್ಕೆ ಮುಗಿಯಿತು. 3ನೇ ಅವಧಿಗೆ ಮುಂದುವರೆಯಲು ನಿರಾಕರಿಸಿದರು. ಕಳೆದ ಸೆಪ್ಟೆಂಬರ್ ನಲ್ಲಿ ಜಯ್ ಶಾ ಅವಿರೋಧವಾಗಿ ಆಯ್ಕೆ ಆದರು.
2019ರಿಂದ 24ರ ನವೆಂಬರ್ 30ರ ತನಕ ಬಿಸಿಸಿಐ(BCCI) ಕಾರ್ಯದರ್ಶಿಯಾಗಿ ಜಯ್ ಶಾ ಕಾರ್ಯನಿರ್ವಹಿಸಿದ್ದಾರೆ. ಈ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಪುತ್ರ ರೋಹನ್ ಬರುವ ಸಾಧ್ಯತೆಯಿದೆ. ದುಬೈನಲ್ಲಿ ಐಸಿಸಿ ಕೇಂದ್ರ ಕಚೇರಿಯಿದೆ. 115 ವರ್ಷಗಳ ಹಿಂದೆ ಇದು ಸ್ಥಾಪನೆಯಾಗಿದೆ. ಜಗನ್ಮೋಹನ್ ದಾಲ್ಮಿಯಾ, ಶರದ್ ಪವಾರ್, ಶಶಾಂಕ್ ಮನೋಹರ್, ಎನ್.ಶ್ರೀನಿವಾಸನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಭಾರತೀಯರಾಗಿದ್ದಾರೆ.