Ad imageAd image

ಜೈಸ್ವಾಲ್ ಶತಕ… 246 ರನ್ ಮುನ್ನಡೆ ಸಾಧಿಸಿದ ಭಾರತ

Nagesh Talawar
ಜೈಸ್ವಾಲ್ ಶತಕ… 246 ರನ್ ಮುನ್ನಡೆ ಸಾಧಿಸಿದ ಭಾರತ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಲಂಡನ್(London): ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಸರಣಿಯಲ್ಲಿ 2ನೇ ಶತಕ ದಾಖಲಿಸಿದರು. ನೈಟ್ ವಾಚ್ ಮೆನ್ ಆಗಿ ಕ್ರಿಸ್ ಗೆ ಬಂದಿದ್ದ ಬೌಲರ್ ಆಕಾಶ್ ದೀಪ್ ಅರ್ಧಶತಕ ಗಳಿಸಿದರು. ಈ ಮೂಲಕ ಭಾರತ ಉತ್ತಮ ಮುನ್ನಡೆ ಸಾಧಿಸಿದೆ.

ಜೈಸ್ವಾಲ್ 118, ಆಕಾಶ್ ದೀಪ್ 66 ರನ್ ಗಳಿಸಿ ಔಟ್ ಆಗಿದ್ದಾರೆ. ರವೀಂದ್ರ ಜಡೇಜಾ 25, ಧ್ರುವ್ ಜುರೆಲ್ 11 ರನ್ ಗಳೊಂದಿಗೆ ಆಡುತ್ತಿದ್ದಾರೆ. 69.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದ್ದು, 266 ರನ್ ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಪರ ಗುಸ್ ಅತ್ಕಿಸನ್ 3, ಜೋಶ್ ಟಂಗ್ 2, ಓವರ್ ಟನ್ 1 ವಿಕೆಟ್ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article